Tuesday, March 17, 2026
ಸುದ್ದಿ

ಸಮುದ್ರದಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರನ್ನು ರಕ್ಷಿಸಿದ ಶ್ರೀಲಂಕಾ ನೌಕಾಪಡೆ- ಕಹಳೆ ನ್ಯೂಸ್

ಕೊಲಂಬೊ: ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ತೊಂದರೆಗೀಡಾಗಿ ಕಾಣೆಯಾಗಿದ್ದ ನಾಲ್ವರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದೆ ಎಂದು ಸೋಮವಾರ ಅಧಿಕೃತ ಹೇಳಿಕೆ ತಿಳಿಸಿದೆ.

ಮುಂಬೈನ ಸಾಗರ ರಕ್ಷಣಾ ಸಮನ್ವಯ ಕೇಂದ್ರ (ಎಂಆರ್‌ಸಿಸಿ) ಸೂಚನೆ ನೀಡಿದ ನಂತರ ಶ್ರೀಲಂಕಾ ನೌಕಾಪಡೆಯು ನಡೆಸಿದ ಸಂಘಟಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ(ಎಸ್‌ಎಆರ್) ಭಾನುವಾರ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಕೂಲ ಹವಾಮಾನದಿಂದಾಗಿ ಜೂನ್ 29ರಂದು ಕಾಣೆಯಾಗಿದ್ದ ಭಾರತೀಯ ಮೀನುಗಾರಿಕಾ ದೋಣಿಯ ಬಗ್ಗೆ ಎಂಆರ್‌ಸಿಸಿ, ಶ್ರೀಲಂಕಾ ನೌಕಾಪಡೆಗೆ ಎಚ್ಚರಿಕೆ ನೀಡಿತ್ತು. ಎಲ್ಲ ಸಂವಹನ ಸಂಪರ್ಕಗಳನ್ನು ಬೋಟ್ ಕಳೆದುಕೊಂಡಿತ್ತು.

ಜಾಹೀರಾತು
ಜಾಹೀರಾತು

ಮೀನುಗಾರಿಕಾ ದೋಣಿ ಸಮುದ್ರದಲ್ಲಿ ತೊಂದರೆಗೆ ಒಳಗಾಗಿ ಚಿಲಾವ್‌ನಲ್ಲಿ ಸಿಲುಕಿದ್ದ ನಾಲ್ವರು ಭಾರತೀಯ ಮೀನುಗಾರರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ಭಾರತದ ಮಿನಿಕೋಯ್ ದ್ವೀಪದ ಮೀನುಗಾರರನ್ನು ಡಿಕೋವಿಟಾ ಬಂದರಿಗೆ ಸುರಕ್ಷಿತವಾಗಿ ಕರೆತರಲಾಯಿತು. ಅಲ್ಲಿ ಶ್ರೀಲಂಕಾ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಅಗತ್ಯ ನೆರವನ್ನು ನೀಡಿದೆ.

ಕಳೆದ ಎರಡು ವಾರಗಳಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರನ್ನು ರಕ್ಷಿಸಿದ ಎರಡನೇ ಪ್ರಕರಣ ಇದಾಗಿದೆ.