
ಕುಂದಾಪುರ : ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ, ಗೆಳೆಯರ ಬಳಗ ಆನಗಳ್ಳಿ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ರಿಜಾಯ್ ಇವೆಂಟ್ ಗ್ರೂಪ್, ಹಾಗೂ ರಕ್ತ ನಿಧಿ ಕೆಎಂಸಿ ಆಸ್ಪತ್ರೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ *ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ರಕ್ತದಾನವು ಒಂದು ಉದ್ಧಾತ ಕಾರ್ಯವಾಗಿದೆ ರೋಗಿಗಳು ಜೀವ ಉಳಿಸಲು ಸಹಾಯಕವಾಗುತ್ತದೆ. ರಕ್ತದಾನ ಮಾಡುವುದರಿಂದ ವ್ಯಕ್ತಿಗೆ ಯಾವುದೇ ರೀತಿಯ ಹಾನಿಯಾಗದೆ. ಹಲವಾರು ಪ್ರಾಯೋಜನೆಗಳನ್ನು ಪಡೆದುಕೊಳ್ಳಬಹುದು. ಎಂದು ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳನ್ನಾಡಿ ಈ ಕಾರ್ಯಕ್ರಮವನ್ನು ಮಾಡುತ್ತಿರುವ ಸಂಸ್ಥೆಗೆ ಶುಭ ಹಾರೈಸಿದರು.
ರಕ್ತದಾನ ಶಿಬಿರವನ್ನು ಕೋಟ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ.ಕುಂದರ್. ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.
ಇದೆ ವೇಳೆ ಮುಂದಿನ ದಿವಸ ನೆರವೇರಿವ ನಮ್ಮೂರ ಹಬ್ಬದ ಲಾಂಛನವನ್ನು ಕನ್ನಡ ಚಲನಚಿತ್ರ ನಟ ನಿರ್ಮಾಪಕರಾದ ರವಿ ಬಸ್ರೂರು, ನಟ ಪ್ರದೀಪ್ ಕುಮಾರ್ ಶೆಟ್ಟಿ, ಬಿಡುಗಡೆಗೊಳಿಸಿದರು.
ದಾಖಲೆ ಇತಿಹಾಸ ಬರೆದ ಕರಾವಳಿಯಲ್ಲಿ 280 ಯೂನಿಟ್ ರಕ್ತ ಸಂಗ್ರಹಿಸಿ ಸತತವಾಗಿ 6ನೇ ಬಾರಿಗೆ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದ ಎಲ್ಲ ರಕ್ತದಾನಿಗಳಿಗೂ ಹಾಗೂ ನನ್ನ ಜೊತೆ ನಿಂತು ಕೈಜೋಡಿಸಿದ ನನ್ನೆಲ್ಲಾ ಮಿತ್ರರಿಗೂ ಮತ್ತು ಸಂಘ ಸಂಸ್ಥೆಗಳಿಗೂ ಕಾರ್ಯಕ್ರಮದ ಆಯೋಜಕರಾದ ಶರತ್ ಕಾಂಚನ್ ಆನಗಳ್ಳಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಸದ್ರಿ ಈ ಕಾರ್ಯಕ್ರಮದಲ್ಲಿ ಸತೀಶ್ ಸಾಲಿಯನ್ ಮಣಿಪಾಲ, ರಕ್ತದಾನದ ಆಪದ್ಬಾಂಧವ ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ
,ಗಣೇಶ್.ಕೆ. ಅಧ್ಯಕ್ಷರು ಗೆಳೆಯರ ಬಳಗ ಆನಗಳ್ಳಿ, ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಅಧ್ಯಕ್ಷರು ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ, ಬಿ.ಬಿ ಹೆಗ್ಡೆ ಕಾಲೇಜಿನ ಉಪನ್ಯಾಸಕ ಚೇತನ್ ಶೆಟ್ಟಿ ಕೋವಾಡಿ , ಪತ್ರಕರ್ತರಾದ ನಾಗರಾಜ್ ರಾಯಪ್ಪನ ಮಠ, ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜಯಕರ ಶೆಟ್ಟಿ,, ಕೆಎಂಸಿ ಆಸ್ಪತ್ರೆ ಮಣಿಪಾಲದ ಪ್ರೊಫೆಸರ್ ಮತ್ತು ಹೆಡ್ ಡಾ. ಶಮಿ ಶಾಸ್ತ್ರಿ,, ಹಾಗೂ ವಿವಿಧ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ನಾಗರಾಜ್ ಸಂಜನಾ ಭಟ್ಕಳ, ನಿರ್ವಹಿಸಿದರು. ಸುರೇಂದ್ರ ಕಾಂಚನ್ ಸಂಗಮ್ ವಂದನಾರ್ಪಣೆ ಸಲ್ಲಿಸಿದರು.














