ವಿಶ್ವ ಹಿಂದು ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಯುವ 15ನೇ ವರುಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಶೋಭಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಹಾಗೂ ವಿಶ್ವ ಹಿಂದು ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಯುವ 15ನೇ ವರುಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಶೋಭಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಉತ್ಸವ ಸಮಿತಿಯ ಸಂಚಾಲಕರಾದ ಅರುಣ್ ಕುಮಾರ್ ರೈ ಆನಾಜೆಯವರು ಬಿಡುಗಡೆಗೊಳಿಸಿದರು.. ಈ ಸಂದರ್ಭದಲ್ಲಿ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಹಿಂದು ಮುಖಂಡರಾದ ಮುರಳೀಕೃಷ್ಣ ಹಸಂತ್ತಡ್ಕ, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ, ಜಯಂತ್ ಕುಂಜೂರು ಪಂಜ, ಗಣೇಶ್ ಕಾಮತ್, ಕೇಶವ ಪ್ರಸಾದ್ ಬಿ.ವಿ., ದಾಮೋದರ ಪಾಟಾಳಿ, ಜಿತೇಶ್ ಬಲ್ನಾಡು , ಜಯಂತ್ ಶೆಟ್ಟಿ ಕಂಬಳತ್ತಡ್ಡ, ಮತ್ತತ್ತಿರರು ಉಪಸ್ಥಿತ್ತರಿದ್ದರು.
ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಪ್ರಯುಕ್ತ ಪುತ್ತೂರುನಲ್ಲಿ ವಿಜೃಂಭಣೆಯಿAದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ದ 15ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ವೇದ ಲಕ್ಷ್ಮೀಕಾಂತ್, ಸಂಚಾಲಕರಾಗಿ ಅರುಣ್ ಕುಮಾರ್ ರೈ ಆನಾಜೆ, ಕಾರ್ಯದರ್ಶಿಯಾಗಿ ಗಣೇಶ್ ಕಾಮತ್ ಮತ್ತು ಕೋಶಾಧಿಕಾರಿಯಾಗಿ ಕೇಶವ್ ಪ್ರಸಾದ್ ಬಿ.ವಿ. ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಸುಹಾಸ್ ಮರಿಕೆ, ಡಾ.ಅನನ್ಯ ಲಕ್ಷ್ಮಿ,ಶೇಖರ ಬ್ರಹ್ಮನಗರ, ನಿತಿನ್ ಕುಮಾರ್ ಮಂಗಳಾ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಗಳಾಗಿ ಜಯಂತ್ ಕರ್ಕುಂಜ, ಚಂದ್ರನಾಥ ಮುಕ್ವೆ, ಸಂಜಯ್ ಬನಾರಿ, ದಿನೇಶ್ ತಿಂಗಳಾಡಿ ಮತ್ತು ಸಹ ಕೋಶಾಧಿಕಾರಿಗಳಾಗಿ ಚೇತನ್ ಬೊಳುವಾರು, ಕೆ.ನಾಗೇಶ್ ಶೆಣೈ, ಭವಿತ್ ಬಲ್ನಾಡು, ಜಗದೀಶ್ ಅಗಳಿ ಕಾಣಿಯೂರು ಆಯ್ಕೆಯಾಗಿದ್ದಾರೆ.
ವಿಶ್ವ ಹಿಂದೂ ಪರಿಷದ್ ವತಿಯಿಂದ ಪಂಚವಟಿಯಲ್ಲಿ ನಡೆದ ಬೈಠಕ್ ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಪದಾಧಿಕಾರಿಗಳು, ಪ್ರಖಂಡದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.














