ಮದುವೆಯಾಗುವುದಾಗಿ ನಂಬಿಸಿ ವಂಚನೆ: ಪರಾರಿಯಾಗಲು ಸಹಕರಿಸಿದ ಆರೋಪದಡಿ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ಅರೆಸ್ಟ್ ; ಜಾಮೀನು ಮಂಜೂರು..!!! -ಕಹಳೆ ನ್ಯೂಸ್

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿ ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ಆರೋಪಿ ಕೃಷ್ಣ ಜೆ. ರಾವ್ (21) ನನ್ನು
ಪೊಲೀಸರು ಬಂಧಿಸಿದ ಬೆನ್ನಲ್ಲೇ ಪರಾರಿಯಾಗಲು ಸಹಕರಿಸಿದ ಆರೋಪದಡಿ ಆರೋಪಿಯ ತಂದೆ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ನನ್ನು ಬಂಧಿಸಲಾಗಿತ್ತು ಇದೀಗ ಅವರಿಗೆ ಜಾಮೀನು ಮಂಜೂರಾಗಿದೆ. ಆರೋಪಿ ತಪ್ಪಿಸಿಕೊಂಡ ನಂತರ ಆತನ ಸುಳಿವು ಸಿಗದಂತೆ ಜಗನ್ನಿವಾಸ ರಾವ್ ಮಾಡಿದ್ದರು ಎನ್ನಲಾಗಿತ್ತು. ಪ್ರಧಾನ ವ್ಯವಹಾರಿಕ ನ್ಯಾಯಧೀಶರಾದ ಶಿವಣ್ಣ ಎಚ್. ಆರ್ ಜಾಮೀನು ಮಂಜೂರು ಮಾಡಿದ್ದು ಅವರ ಪರ ನ್ಯಾಯವಾದಿ ಸುರೇಶ್ ರೈ ಪಡ್ಡಂಬೈಲು, ರಾಘವ ಪಿ, ಶ್ರೀಕಾಂತ್ ಅವರು ವಾದಿಸಿದರು.














