
ಕುಣಿಗಲ್: ಕ್ಯಾಂಟರ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ಬಿದನಗೆರೆ ಬೈಪಾಸ್ ಬಳಿ ಸಂಭವಿಸಿದೆ.
ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ನಟರಾಜ ಬಡಾವಣೆ ನಿವಾಸಿ ಭಾರತ್ ಕೋಪರೇಟಿವ್ ಬ್ಯಾಂಕ್ ನಿರ್ದೇಶಕ ಸೀಬೆಗೌಡ (45) ಪತ್ನಿ ಶೋಭಾ (36) ಮಕ್ಕಳಾದ ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು.
ಸೀಬೆಗೌಡ ತನ್ನ ಮಗನನ್ನು ಭಾನುಕಿರಣ್ ನನ್ನು ಕುಣಿಗಲ್ ನ ವಾಲಿ ಇಂಟರ್ ನ್ಯಾಷನಲ್ ಶಾಲೆಗೆ ಬಿಡಲು ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಬರುವಾಗ ಕಾರಿಗೆ ಹಾಸನ ನಡೆಯಿಂದ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಈ ಘಟನೆಗೆ ಕ್ಯಾಂಟರ್ ನ ಚಾಲಕನ ಅಜಾಗರೂಕತೆ ಮತ್ತು ಸಾರಿಗೆ ನಿಯಮ ಉಲ್ಲಂಘನೆ ಕಾರಣ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ :
ಬಿದನಗೆರೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಿಂದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು ಭಾನುವಾರವಾದ್ದರಿಂದ ವಾಹನಗಳ ಸಂಚಾರ ಈ ಮಾರ್ಗದಲ್ಲಿ ದುಪ್ಪಟ್ಟು ಇತ್ತು. ಕ್ಯಾಂಟರ್ ಮತ್ತು ಕಾರು ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು .ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ವಿಷಯ ತಿಳಿದ ಕುಣಿಗಲ್ ಠಾಣೆಯ ವೃತ್ತ ನಿರೀಕ್ಷಕ ನವೀನ್ ಗೌಡ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿ ಸಂಚಾರಿ ವ್ಯವಸ್ಥೆ ಸುಗಮಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರು. ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.














