Wednesday, March 11, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರತಿಷ್ಠತ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷರಾಗಿ ಟಿ. ತಾರಾನಾಥ ಕೊಟ್ಟಾರಿ ಆಯ್ಕೆ -ಕಹಳೆ ನ್ಯೂಸ್

ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರತಿಷ್ಠತ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷರಾಗಿ ಟಿ. ತಾರಾನಾಥ ಕೊಟ್ಟಾರಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಆನಂದ ಬಂಜನ್ ಪ್ರಕಟಿಸಿದ್ದಾರೆ.

ಹಿರಿಯ ಜೇಸಿಗಳಾದ ಪಿ.ಮಹಮ್ಮದ್ (ಆಡಳಿತ) ಸಂದೀಪ್ ಸಾಲ್ಯಾನ್ (ಸಾರ್ವಜನಿಕ ಸಂಪರ್ಕ) ಮಹೇಶ ನಿಟಿಲಾಪುರ (ವ್ಯಕ್ತಿತ್ವವಿಕಸನ)ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
ಕಾರ್ಯದರ್ಶಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್,ಜೊತೆಕಾರ್ಯದರ್ಶಿ ಯಾಗಿ ಯೋಗೀಶ ಬಂಗೇರ, ನಿರ್ದೇಶಕರಾಗಿ ಸ್ಥಾಪಕ ಅಧ್ಯಕ್ಷ ಪಿಪಿಎಫ್ ಜಯಾನಂದ ಪೆರಾಜೆ, ಮಾಜಿಅಧ್ಯಕ್ಷ ಡಾ.ಆನಂದ ಬಂಜನ್ ನಿಯುಕ್ತಿಗೊಂಡಿದ್ದಾರೆ.ಹದಿನಾಲ್ಕು ಮಂದಿ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಧ್ಯಕ್ಷ ಕೇದಿಗೆ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪದಗ್ರಹಣ ಸಮಾರಂಭವನ್ನು ಜು.29 ರಂದು ಬೆಳಿಗ್ಗೆ 10.25ಕ್ಕೆ ಬಿಸಿರೋಡಿನ ಪೊಳಲಿ ದ್ವಾರದ ಬಳಿ ನೂತನ ಸಭಾಂಗಣ ಅಕ್ಷಯ ಸಭಾಭವನ ಲೋಕಾರ್ಪಣೆ ಗೊಳ್ಳಲಿದೆ.
ಪದಗ್ರಹಣ ಸಮಾರಂಭ 11 ಗಂಟೆಗೆ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಸ್ವಿಎಸ್ ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಗಂಗಾಧರ ಆಳ್ವ ಮುಖ್ಯ ಅತಿಥಿಯಾಗಿ, ಗೌರವ ಅತಿಥಿಗಳಾಗಿ ಎಸ್ಸಿಐ ರಾಷ್ಟ್ರಾಧ್ಯಕ್ಷರಾದ ಎಂ.ಆರ್.ಜಯೇಶ್, ಮಾಜಿ ರಾಷ್ಟ್ರಾಧ್ಯಕ್ಷ ಡಾ.ಕೆ.ಅರವಿಂದ ರಾವ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು