Friday, March 13, 2026
ಸುದ್ದಿ

ಮುಂಗಾರು ಮತ್ತೆ ಚುರುಕು! ಜೂನ್ 27ರವರೆಗೆ ಭಾರೀ ಮಳೆ, ರೆಡ್ ಅಲರ್ಟ್- ಕಹಳೆ ನ್ಯೂಸ್

ಮುಂಗಾರು ಮಳೆ ಅಬ್ಬರ ಕೆಲವು ಕಡೆಗಳಲ್ಲಿ ತಗ್ಗಿದರೆ, ಮತ್ತೆ ಕೆಲವು ಭಾಗಗಳಲ್ಲಿ ಚುರುಕಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಜೋರಾಗಿದ್ದ ಮುಂಗಾರು ಸಂಪೂರ್ಣ ಕಡಿಮೆಯಾಗಿದೆ. ಮಧ್ಯ ಪ್ರದೇಶ, ಗುಜರಾತ್ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಒಂದು ವಾರ ಭಾರೀ ಮಳೆ ಬರಲಿದೆ ಎಂದು ಎಚ್ಚರಿಕೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಈವರೆಗೆ ಆರ್ಭಟಿಸಿದ್ದ ಮಳೆರಾಯ ಒಂದು ವಾರದಿಂದಲೂ ಉತ್ತರ ರಾಜ್ಯಗಳಲ್ಲಿ ರುದ್ರನರ್ತನ ರೂಪ ತಾಳಿದ್ದಾನೆ. ಜೂನ್ 23ರಿಂದ ಭಾರತದ ಉತ್ತರ ಭಾಗಗಳಲ್ಲಿ ಜೋರು ಮಳೆ ಮುಂದುವರಿಯಲಿದೆ. ಗುಜರಾತ್ ಬಳಿಕ ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಇದೆ. ಇಲ್ಲಿ 200 ಮಿಲಿ ಮೀಟರ್‌ಗೂ ಹೆಚ್ಚಿನ ಮಳೆ ಆಗಲಿದ್ದು, ‘ರೆಡ್ ಅಲರ್ಟ್’ ನೀಡಲಾಗಿದೆ.

ಜಾಹೀರಾತು
ಜಾಹೀರಾತು

ಅರಬ್ಬಿ ಸಮುದ್ರ ಭಾಗದಿಂದ ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ ಹೀಗೆ ಝಾರ್ಖಂಡ್‌ವರೆಗೆ ಭೂಮಿ ಮೇಲ್ಮೈನಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಜೋರು ಬಿರುಗಾಳಿ ಬೀಸುತ್ತಿದೆ. ಈ ಕಾರಣದಿಂದ ಮುಂಗಾರು ಮಳೆ ಈ ರಾಜ್ಯಗಳಲ್ಲಿ ನೆಲೆಯೂರಿದೆ.

ವೈಪರೀತ್ಯದ ಪ್ರಭಾವದಿಂದಾಗಿ ಹಿಮಾಲಯದ ಉಪಪ್ರದೇಶಗಳು, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಝಾರ್ಖಂಡ್ ರಾಜ್ಯಗಳಲ್ಲಿ ಜೂನ್ 24ರವರೆಗೆ ಭಾರೀ ಮಳೆ ಆಗಲಿದೆ. ಒಡಿಶಾ, ವಿದರ್ಭ, ಛತ್ತೀಸ್‌ಗಢ ರಾಜ್ಯಗಳಲ್ಲಿ ಭಾರೀ ಮಳೆ ಪ್ರಯುಕ್ತ ಮುಂದಿನ ಎರಡು ದಿನ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರದ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.

ಜೂನ್ 27ರವರೆಗೆ ಭಾರೀ ಮಳೆ

ಇನ್ನೂ ಜೂನ್ 27ರವರೆಗೆ ಗೋವಾ -ಕೊಂಕಣ ಭಾಗ, ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಜೋರು ಮಳೆ ಆಗಲಿದೆ. ಉತ್ತರಾ ಖಂಡ, ಉತ್ತರ ಪ್ರದೇಶ, ರಾಜಸ್ಥಾನ್, ಹರಿಯಾಣ, ಪಂಜಾಬ್‌ ಭಾಗಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಈಗಾಗಲೇ ಸುರಿದ ಮಳೆಗೆ ಮಣಿಪುರ, ಅಸ್ಸಾಂ, ಮೇಘಾಲಯ, ಗುಜರಾತ್ ಭಾಗಗಳಲ್ಲಿ ಹಾನಿ ಉಂಟಾಗಿದೆ. ಪ್ರವಾಹ ಸ್ಥಿತಿ ಉಂಟಾಗಿದೆ.

ದೆಹಲಿ ಹವಾಮಾನ ವರದಿ ಏನಿದೆ?

ಇಂದು ಭಾನುವಾರ ಗುಜರಾತ್ ಭಾಗದಲ್ಲಿ ಹೆಚ್ಚಿನ ಮಳೆ ಆಗಲಿದೆ. ಆದರೆ ದೆಹಲಿಗೆ ಜೋರು ಮಳೆಯ ಲಕ್ಷಣಗಳು ಇಲ್ಲ. ಅಲ್ಲಲ್ಲಿ ಸಾಮಾನ್ಯ ಮಳೆ ಬರಬಹುದು ಎಂದು ಹೇಳಲಾಗಿದೆ. ಮಳೆ ಬರುವ ರಾಜ್ಯಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50-60 ಕಿಲೋ ಮೀಟರ್ ವರೆಗೆ ಇರಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಇನ್ನು ಕರ್ನಾಟಕ ರಾಜ್ಯದಲ್ಲಿ ಮಳೆ ದುರ್ಬಲಗೊಂಡಿದೆ. ಒಟ್ಟು ಆರು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಮಾತ್ರ ಮಳೆ ಮುಂದುವರಿಯಲಿದೆ. ಉಳಿದಡೆ ಬಿಸಿಲಿನ ವಾತಾವರಣ ಕಂಡು ಬಂದಿದೆ. ಕೇರಳ, ತಮಿಳುನಾಡು, ಆಂಧ್ರದಲ್ಲೂ ಇದೇ ಪರಿಸ್ಥಿತಿ ಇದೆ. ಇದರ ನಡುವೆ ಜೂನ್ 27ರಿಂದ ಕರ್ನಾಟಕದ ವಿವಿಧೆಡೆ ಜೋರು ಮಳೆ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆಗಳು ದಟ್ಟವಾಗಿವೆ. ಏಕೆಂದರೆ ಹವಾಮಾನದಲ್ಲಿನ ಬದಲಾವಣೆಯು ಆಗಾಗ ಘಟಿಸುವ ಕಾರಣಕ್ಕೆ ಮಳೆ ಕಡಿಮೆಯಾದ ಪ್ರದೇಶಗಳಲ್ಲಿ ದಢೀರನೆ ಹೆಚ್ಚಾಗಬಹುದೆಂದು ಹವಾಮಾನ ತಜ್ಞರು ಊಹಿಸಿದ್ದಾರೆ.