Thursday, March 12, 2026
ಸುದ್ದಿ

ಜೋಗನ ಹಕ್ಕಲು ಫಾಲ್ಸ್‌ ನೋಡೋಕೆ ಬಂದಿದ್ದ ಯುವಕ ಕಾಲುಜಾರಿ ಬಿದ್ದು ನಾಪತ್ತೆ – ಕಹಳೆ ನ್ಯೂಸ್

ಕಾರವಾರ: ಯುವಕನೊಬ್ಬ ಕಾಲುಜಾರಿ ಹಳ್ಳಕ್ಕೆ ಬಿದ್ದು ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜೋಗನ ಹಕ್ಕಲು ಜಲಪಾತದಲ್ಲಿ ನಡೆದಿದೆ.
ನಾಪತ್ತೆಯಾದ ಯುವಕನನ್ನು ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಪವನ್ ಗಣಪತಿ ಜೋಗಿ (24) ಎಂದು ಗುರುತಿಸಲಾಗಿದೆ. ಸ್ನೇಹಿತ ವಾಸುದೇವ್ ಜೊತೆ ಪವನ್‌ ಫಾಲ್ಸ್ ನೋಡಲು ಭಾನುವಾರ ಸಂಜೆ ತೆರಳಿದ್ದ. ಜಲಪಾತದ ಸಮೀಪ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲುಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.

ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾದ ಯುವಕನ ಶೋಧ ಕಾರ್ಯ ನಡೆಯುತ್ತಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು