Monday, March 16, 2026
ಸುದ್ದಿ

ಮಿತ್ರ ರಾಷ್ಟ್ರ ಇಸ್ರೇಲ್ ಗೆ ಯುದ್ಧದಲ್ಲಿ ಬೆಂಬಲಿಸಿ ಮಧ್ಯಪ್ರವೇಶಿಸುವ ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಇರಾನ್ – ಕಹಳೆ ನ್ಯೂಸ್

ಟೆಹರಾನ್: ಮಿತ್ರ ರಾಷ್ಟ್ರ ಇಸ್ರೇಲ್ ಬೆಂಬಲಿಸಿ ಯುದ್ಧದಲ್ಲಿ ಮಧ್ಯಪ್ರವೇಶಿಸುವ ಅಮೆರಿಕದ ಪ್ರಯತ್ನಕ್ಕೆ ಇರಾನ್ ಎಚ್ಚರಿಕೆ ನೀಡಿದೆ. ಯದ್ಧದಲ್ಲಿ ಇಸ್ರೇಲ್ ಅನ್ನು ಬೆಂಬಲಿಸಿದರೆ ಪ್ರತಿರೋಧ ಒಡ್ಡಲು ನಾವು ಸಿದ್ಧ ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಹೇಳಿದ್ದಾರೆ.

‘ಯಹೂದಿ ಆಡಳಿತದ ಪರವಾಗಿ ಅಮೆರಿಕ ಯುದ್ಧದಲ್ಲಿ ಸಕ್ರಿಯವಾಗಿ ಪ್ರವೇಶಿಸಲು ಬಯಸಿದರೆ, ಆಕ್ರಮಣಕಾರರಿಗೆ ಪಾಠ ಕಲಿಸಲು, ರಾಷ್ಟ್ರೀಯ ಭದ್ರತೆ ಹಾಗೂ ಹಿತಾಸಕ್ತಿಯನ್ನು ರಕ್ಷಿಸಲು ಇರಾನ್ ತನ್ನ ಆಯುಧಗಳನ್ನು ಬಳಸಬೇಕಾಗುತ್ತದೆ’ ಎಂದು ಕಾಝೆಂ ಘರಿಬಾಬಾದಿ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸೇನಾ ತೀರ್ಮಾನವನ್ನು ಮಾಡುವ ಅಧಿಕಾರಿಗಳಿಗೆ ಎಲ್ಲಾ ಆಯ್ಕೆಗಳು ಮುಂದಿವೆ ಎಂದು ಅವರು ಹೇಳಿದ್ದಾಗಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಜಾಹೀರಾತು
ಜಾಹೀರಾತು

ಇಸ್ರೇಲ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದ ಬೆನ್ನಲ್ಲೇ ಆಪರೇಷನ್ ‘ಟ್ರು ಪ್ರಾಮಿಸ್ 3’ ಕಾರ್ಯಾಚರಣೆಯ 12ನೇ ಅಲೆಯ ಭಾಗವಾಗಿ ಅತಿ ಭಾರದ, ದೀರ್ಘ ಶ್ರೇಣಿಯ ಎರಡು ಹಂತದ ಸಿಜ್ಜಿಲ್ ಕ್ಷಿಪಣಿಗಳ ದಾಳಿಯನ್ನು ಪ್ರಾರಂಭಿಸಿರುವುದಾಗಿ ಇರಾನ್ ಹೇಳಿದೆ.