ಇನ್ಮುಂದೆ 4:30ರ ನಂತರ ಉದ್ಯೋಗಿಗಳು ಕಚೇರಿ ಕೆಲಸ ಮಾಡುವಂತಿಲ್ಲ – ಸುಪ್ರೀಂ ಕೋರ್ಟ್ ನಿಂದ ಹೊಸ ನಿಯಮ –ಕಹಳೆ ನ್ಯೂಸ್

ನವದೆಹಲಿ : ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ತನ್ನ ಕಚೇರಿ ಕೆಲಸದ ಅವಧಿಯಲ್ಲಿ ಹೊಸ ಬದಲಾವಣೆ ತಂದಿದೆ. ಈ ಹೊಸ ಬದಲಾವಣೆಗಳು ಜುಲೈ 14 ರಿಂದ ಜಾರಿಗೆ ಬರಲಿದೆ.ಈ ನಿಯಮಗಳನ್ನು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು-2025 ಎಂಬ ಹೆಸರಿನಲ್ಲಿ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.
ಇನ್ಮುಂದೆ ಸುಪ್ರೀಂ ಕೋರ್ಟ್ ಕಚೇರಿಯಲ್ಲಿ ಸಂಜೆ 4.30 ನಂತರ ಯಾವುದೇ ಉದ್ಯೋಗಿ ಕೆಲಸ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೊಸ ನಿಯಮ ಹೇಳುತ್ತದೆ.ಆದ್ರೆ ಯಾವುದಾದರೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಉದ್ಯೋಗಿಗಳ ಕೆಲಸದ ಸಮಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದೆ.
ಇನ್ನುಳಿದಂತೆ ತಿಂಗಳ 4 ಶನಿವಾರ ಕೂಡ ಉದ್ಯೋಗಿಗಳಿಗೆ ಕೆಲಸ ಕಡ್ಡಾಯವಾಗಿರಲಿದೆ.ಆ ಮೂಲಕ ಸುಪ್ರೀಂ ಕೋರ್ಟ್ ನೋಂದಾವಣೆ ಮತ್ತು ಕಚೇರಿಗಳಿಗೆ ತಿಂಗಳಿನ ಎರಡನೇ ಹಾಗೂ ನಾಲ್ಕನೇ ಶನಿವಾರ ಇದ್ದ ರಜೆಗಳನ್ನು ರದ್ದು ಮಾಡಿದೆ.














