Monday, March 9, 2026
ಮಡಿಕೇರಿಸುದ್ದಿ

ಸೋಮವಾರಪೇಟೆ | ಭಾರಿ ಗಾಳಿ ಮಳೆ: ಹಾನಿ –ಕಹಳೆ ನ್ಯೂಸ್

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ  ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದ್ದು, ಅಲ್ಲಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.

ದೊಡ್ಡತೋಳೂರು ಗ್ರಾಮದ ದಿನೇಶ್ ಎಂಬುವವರ ಹಸು ಶೀತದಿಂದ ಕೊಟ್ಟಿಗೆಯಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಪಶು ವೈದ್ಯರು ತೆರಳಿ ಪರಿಶೀಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕುಸೂಬೂರು ದೇವಾಲಯದ ಮುಂಭಾಗ ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದ ವಿದ್ಯುತ್ ಕಂಬದ ಮೇಲೆ ಮರಬಿದ್ದು, ಹೆದ್ದಾರಿಗೆ ವಿದ್ಯುತ್ ಕಂಬ ಮತ್ತು ಲೈನ್ ವಾಲಿದೆ. ಖಾಸಗಿ ಬಸ್ ಮೇಲೆ ನಿಂತು ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಕಂಬ ಮತ್ತು ಮಾರ್ಗವನ್ನು ಸರಿಪಡಿಸಿದರು.

ಜಾಹೀರಾತು
ಜಾಹೀರಾತು

ಬಜೆಗುಂಡಿ ಬಳಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು, ವಿದ್ಯುತ್ ಕಂಬ ಮುರಿದು ಬಿದ್ದಿದೆ. ಶುಂಠಿ ಗ್ರಾಮದ ಎಚ್.ಎಂ.ಜಿತೇಂದ್ರ ಎಂಬವರ ಲೈನ್ ಮನೆಯ ಶೀಟ್ ಗಾಳಿಗೆ ಹಾರಿಹೋಗಿದೆ.

ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 14 ಸೆಂ.ಮಿ ಮಳೆಯಾಗಿದೆ. ಸೋಮವಾರಪೇಟೆ ಕಸಬಾ 7.4, ಶನಿವಾರಸಂತೆಗೆ 4.8, ಕೊಡ್ಲಿಪೇಟೆಗೆ 3.54 ಮಳೆಯಾಗಿದೆ. ಸೋಮವಾರಪೇಟೆ ಸಮೀಪದ ಬಜೆಗುಂಡಿ ಬಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು