Saturday, March 7, 2026
ಕೇರಳಜಿಲ್ಲೆಸುದ್ದಿ

ಐತಿಹಾಸಿಕ ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಿದ ನಟ ದರ್ಶನ್ -ಕಹಳೆ ನ್ಯೂಸ್

ತಿರುವನಂತಪುರಂ: ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿಯಾಗಿರುವ ಕೇರಳದ ಕೊಟ್ಟಿಯೂರು ಶಿವನ ಅತ್ಯಂತ ಪ್ರಾಚೀನದೇವಾಲಯಕ್ಕೆ ನಟ ದರ್ಶನ್ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ದೇವಾಲಯಗಳ ನಾಡಿನಲ್ಲಿರುವ ಶಿವ ದೇವಾಲಯಕ್ಕೆ ಪೌರಾಣಿಕ ಮಹತ್ವವಿದ್ದು ಭವ್ಯವಾದ ವಾರ್ಷಿಕ ಕಾರ್ಯಕ್ರಮ ವೈಶಾಖ ಮಹೋತ್ಸವಕ್ಕೆ ಹೆಸರುವಾಸಿಯಾಗಿದ್ದು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೇವಾಲಯದ ಇತಿಹಾಸ?

ಜಾಹೀರಾತು
ಜಾಹೀರಾತು

ಹಿಂದೂ ಪುರಾಣದ ಪ್ರಕಾರ ಶಿವನ ಸತಿ ಗೌರಿಯ ತಂದೆ ದಕ್ಷ ಮಹಾ ಯಜ್ಞವನ್ನು ಆಯೋಜಿಸಿ ಉದ್ದೇಶಪೂರ್ವಕವಾಗಿ ಶಿವನನ್ನು ಆಹ್ವಾನಿಸಲಿಲ್ಲ. ಆ ಯಜ್ಞ ನಡೆದ ಸ್ಥಳಕೊಟ್ಟಿಯೂರು ದೇವಾಲಯದ ಸ್ಥಳವಾಗಿದೆ ಎಂದು ನಂಬಲಾಗಿದೆ.ಇಲ್ಲಿರುವ ಶಿವಲಿಂಗವನ್ನು ಸ್ವಯಂಭು ಎಂದು ಪರಿಗಣಿಸಲಾಗಿದೆ. ನದಿಯ ಕಲ್ಲುಗಳ ಎತ್ತರದಲ್ಲಿ ಲಿಂಗವಿದ್ದು ವಿಶೇಷವಾಗಿ ಕಾಣುತ್ತದೆ.

ವೈಶಾಖಮಹೋತ್ಸವ ನೆಯ್ಯಟ್ಟಂ ಆಚರಣೆಯೊಂದಿಗೆ ಪ್ರಾರಂಭವಾಗುತ್ತದೆ, ಇದರಲ್ಲಿ ಶಿವನನ್ನು ತುಪ್ಪದ ಅಭಿಷೇಕ ಮಾಡಲಾಗುತ್ತದೆ. ಉತ್ಸವವು ಎಳನೀ ರಿನಲ್ಲಿ ಶಾಸ್ತ್ರೋಕ್ತವಾಗಿ ಅಭಿಷೇಕ ಮಾಡಿ ಕೊನೆಗೊಳಿಸಲಾಗುತ್ತದೆ. ಆದಿ ಶಂಕರಾಚಾರ್ಯರ ಕಾಲದಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ. ವೈಶಾಖಮಹೋತ್ಸವ ಆಚರಣೆಗೆ ನಿಯಮಗಳನ್ನು ಸಹ ರೂಪಿಸಿದರು ಎಂದು ಹೇಳಲಾಗಿದೆ.