Wednesday, March 11, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸನಾತನ ನಾಟ್ಯಾಲಯ ವತಿಯಿಂದ ನಡೆದ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮ -2025 -ಕಹಳೆ ನ್ಯೂಸ್

ಮಂಗಳೂರು: ಭಾರತದ ಜ್ಞಾನಪುಂಜ ಎಂದರೆ ಅದು ಕಾಶ್ಮೀರ. ಆದ್ದರಿಂದ ಅದು ಭಾರತ ಮಾತೆಯ ಸಿಂಧೂರವೇ ಹೊರತು ಕೇವಲ ಪ್ರವಾಸಿ ತಾಣ ಎಂದು ಸೀಮಿತ ಮಾಡುವುದು ಸರಿಯಲ್ಲ ಎಂದು ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಭಾನುವಾರ ಕುದ್ಮುಲ್ ರಂಗರಾವಗ ಪುರಭವನದಲ್ಲಿ ಸನಾತನ ನಾಟ್ಯಾಲಯ ವತಿಯಿಂದ ನಡೆದ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದರು.

ಜಾಹೀರಾತು
ಜಾಹೀರಾತು

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆ ಆಳಿದ ಊರು ಕಾಶ್ಮೀರ. ಅಗಾಧ ಗ್ರಂಥಗಳು ರೂಪುಗೊಂಡ, ತಪಸ್ವಿಗಳು ಋಷಿಗಳು ಇದ್ದ ನಾಡು ಕಾಶ್ಮೀರ. ಜಗತ್ರಿನಲ್ಲಿ ಪ್ರಾಚೀನ ಎಂದು ಕರೆಸಿಕೊಂಡ ಗ್ರೀಕ್, ರೋಮನ್, ಲೆಬನಾನ್ ಸೇರಿದಂತೆ ಅನೇಕ ಜನಾಂಗಗಳು ಅಳಿಸಿ ಹೋದವು. ಆದರೆ ಸನಾತನ ಧರ್ಮದ ಮೇಲೆ ಸಾವಿರಕ್ಕೂ ಹೆಚ್ಚು ವರ್ಷ ದಾಳಿ ನಡೆಯಿತು. ಆದರೆ ಸನಾತನ ಹಿಂದೂ ಧರ್ಮ ಜಾಗೃತವಾಗಿದೆ.ತಾಯಿ ಭಾರತಿಯ ಸಿಂಧೂರ ಕಾಪಾಡಲು ಆಕೆಯ ಮಕ್ಕಳು ಸದಾ ಜಾಗೃತರಾಗಿದ್ದರು. ಇಂದಿಗೂ ಜಾಋತರಾಗಿದ್ದಾರೆ ಎಂದು ವಿವರಿಸಿದರು.

ಸಣ್ಣ ವಯಸ್ಸಿನಲ್ಲಿ ಜನರ ಮನಸ್ಸಿನಲ್ಲಿ ಛಾಪೊತ್ತಿದ ಸ್ವರುಣ್ ಅವರ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿನಮನ ಸಲ್ಲಿಸಿದರು.

ಸನಾತನ ನಾಟ್ಯಾಲಯ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ನೃತ್ಯಗುರು ವಿದುಷಿ ಶಾರದಾ ಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್ ಸ್ವರುಣ್ ಅವರ ತಂದೆ ಸುರೇಶ್ ರಾಜ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ವಿದುಷಿ ಶುಭಾಮಣಿ ಮತ್ರು ವಿಜಯಕುಮಾರ್ ಎಸ್. ಚೆನ್ನೈ ಅವರ ನೃತ್ಯ ಪ್ರದರ್ಶನ ನಡೆಯಿತು.