ನಾಗೂರಿನ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆದ ನಾದಾವಧಾನ ಪ್ರತಿಷ್ಠಾನ(ರಿ) ಕುಂದಾಪುರ ಇದರ 2025ರ ವಾರ್ಷಿಕೋತ್ಸವ -ಕಹಳೆ ನ್ಯೂಸ್

ಕುಂದಾಪುರ : ನಾದಾವಧಾನ ಪ್ರತಿಷ್ಠಾನ(ರಿ) ಕುಂದಾಪುರ ಇವರು ನಾಗೂರಿನ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಪ್ರತಿಷ್ಠಾನದ ಗುರುಗಳಾದ ಶ್ರೀ ಎ ಪಿ ಪಾಠಕ್ ಮತ್ತು ಶ್ರೀ ಎನ್ ಜಿ ಹೆಗಡೆಯವರ ಮಾರ್ಗದರ್ಶನದಲ್ಲಿ ಆಯೋಜಿಸಿದ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಕಿರಿಮಂಜೇಶ್ವರದ ಶ್ರೀ ಉಮೇಶ್ ಶಾನ್ ಭಾಗ್ ರವರು ನೆರವೇರಿಸಿದರು. ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನದ ಆಯ್ದ ಪ್ರಸಂಗಗಳಿAದ ಯಕ್ಷಗಾನ ಪದ್ಯಗಳ ಪ್ರಸ್ತುತಿ ನಡೆಯಿತು. ಖ್ಯಾತ ಯಕ್ಷಗಾನ ಕಲಾವಿದರು ತಾಳಮದ್ದಳೆ ಅರ್ಥದಾರಿಗಳೂ ಆದ ಶ್ರೀ ವಾಸುದೇವ ರಂಗಾ ಭಟ್ಟರವರು ಭಾಗವತಿಕೆಯ ಸ್ವರೂಪ ವಿವೇಚನೆ ಕುರಿತು ಮಾತನಾಡುತ್ತಾ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಂಪರೆಯನ್ನು ಉಳಿಸಿಕೊಳ್ಳುತ್ತಾ ಯಕ್ಷಗಾನ ಪ್ರದರ್ಶನ, ರಂಗದಲ್ಲಿ ಶ್ರೀಮಂತವಾಗಿ ರಂಗೇ ರಬೇಕಾದರೆ ಭಾಗವತರ ಹೊಣೆಗಾರಿಕೆ ಮತ್ತು ಸಾಧ್ಯತೆಗಳ ಕುರಿತು ಹಲವು ದೃಷ್ಟಾಂತರಗಳ ಮೂಲಕ ಉದಾಹರಿಸಿ, ಕಲಾವಿದರ ಕಲಿಕೆ ಚೌಕಿಯಲ್ಲೂ ಸಹ ಕಲಾವಿದರೊಂದಿಗೆ ನಡೆಯಬೇಕೆಂಬ ಸಲಹೆಯನ್ನಿತ್ತರು.


ಹಿರಿಯ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆಯವರು ರಾಗ ತಾಳ ಹಾಡಿನ ಮೂಲಕ ವಿವಿಧ ಮಟ್ಟುಗಳ ಪರಿಚಯ ಮಾಡಿಸಿದರು. ಕಾರ್ಯಕ್ರಮದ ಅಂಗವಾಗಿ ಉಭಯ ತಿಟ್ಟುಗಳ ಅಗ್ರಗಣ್ಯ ಭಾಗವತರುಗಳಾದ ಪಟ್ಲ ಶ್ರೀ ಸತೀಶ್ ಶೆಟ್ಟಿ,ಜನ್ಸಾಲೆ ಶ್ರೀ ರಾಘವೇಂದ್ರ ಆಚಾರ್ ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಕುಮಾರಿ ಶ್ರೀರಕ್ಷಾ ಹೆಗಡೆ ಹಾಗೂ ಸಮರ್ಥ ಹಿಮ್ಮೇಳದೊಂದಿಗೆ ‘ಯಕ್ಷ ಗಾನವೈಭವ’ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉಪಸ್ಥಿತರಿದ್ದು ಧರ್ಮ ಸಂಸ್ಕೃತಿಗಳ ಉಳಿವಿಗೆ ಯಕ್ಷಗಾನದ ಕೊಡುಗೆ ಬಹಳ ದೊಡ್ಡದು, ಶ್ರೀಮಂತ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರು ಹಾಗೂ ಸಹೃದಯಿ ಪ್ರೇಕ್ಷಕರ ಜವಾಬ್ದಾರಿಯನ್ನು ತಿಳಿಯ ಹೇಳಿ ಕಾರ್ಯಕ್ರಮದ ಸಂಘಟಕರಿಗೆ ಶುಭಹಾರೈಸಿದರು. ಹಿರಿಯ ಭಾಗವತ ಹೇರಂಜಾಲು ಗೋಪಾಲ ಗಾಣಿಗರಿಗೆ ಇದೇ ಸಂದರ್ಭದಲ್ಲಿ ಗುರುವಂದನೆ ಯನ್ನು ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ , ಶೇಖರ ಖಾರ್ವಿ,ಶುಭಶಂಸನೆ ಗೈದ ಪ್ರೊ. ಪವನ್ ಕಿರಣ್ ಕರೆ, ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಡಾ.ಆದರ್ಶ ಹೆಬ್ಬಾರ್, ಹರೀಶ್ ಶೆಟ್ಟಿ ಎರ್ಮಾಳ್, ಚಲನಚಿತ್ರ ನಟ, ನಿರ್ದೇಶಕರುಗಳಾದ ಪ್ರಮೋದ್ ಶೆಟ್ಟಿ, ಸಂದೇಶ್ ಶೆಟ್ಟಿ, ಉಪಸ್ಥಿತರಿದ್ದರು.

ಸಂಜೆ ಅಶ್ವಿನಿ ಕೊಂಡದಕುಳಿ ಮತ್ತು ನಾದಾವಧಾನ ವಿದ್ಯಾರ್ಥಿಗಳಿಂದ ಕುಶ ಲವ ಯಕ್ಷಗಾನ ಪ್ರದರ್ಶನ ನಡೆಯಿತು .ಎಂ. ಗೋವಿಂದ ಮಟ್ನಕಟ್ಟೆ ಸ್ವಾಗತಿಸಿದರು .ಡಾಕ್ಟರ್ ಜಗದೀಶ್ ಶೆಟ್ಟಿ ಸಿದ್ದಾಪುರ. ಕೆಪಿ ಪಾಟಕ್ ಕಾರ್ಕಳ. ಅಶೋಕ ಆಚಾರ್ಯ ಸೈಬ್ರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.














