Wednesday, March 11, 2026
ಸುದ್ದಿ

ತಾಂತ್ರಿಕ ಅಡ್ಡಿಯಿಂದ ಲಖನೌದಲ್ಲಿ ಲ್ಯಾಂಡ್​ ಆದ 250 ಪ್ರಯಾಣಿಕರಿದ್ದ ಸೌದಿ ವಿಮಾನ!

ಸೌದಿ ಅರೇಬಿಯಾದಿಂದ ಹಜ್ ಯಾತ್ರಿಕರು ಸೇರಿದಂತೆ ಸುಮಾರು 250 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಉತ್ತರ ಪ್ರದೇಶದ ಲಖನೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಭಾನುವಾರ ಬೆಳಗ್ಗೆ ಸೌದಿ ಅರೇಬಿಯಾ ಏರ್​ಲೈನ್ಸ್​ ವಿಮಾನ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಎಡ ಚಕ್ರದಿಂದ ಹೊಗೆ ಹೊರಹೊಮ್ಮುತ್ತಿರುವುದು ಕಂಡುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಚಕ್ರದಲ್ಲಿನ ದೋಷವು ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ಸೋರಿಕೆಯಿಂದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಜಾಹೀರಾತು
ಜಾಹೀರಾತು

ಫ್ಲೈಟ್‌ರಾಡಾರ್ 24ರ ದತ್ತಾಂಶದ ಪ್ರಕಾರ, ಏರ್‌ಬಸ್ A330-343 ವಿಮಾನವು ಶನಿವಾರ ರಾತ್ರಿ 10.45ಕ್ಕೆ ಜೆಡ್ಡಾದಿಂದ ಹೊರಟು ಬೆಳಗ್ಗೆ 6.50 ರ ಸುಮಾರಿಗೆ ಲಖನೌ ತಲುಪಿತು.

ಪ್ರತ್ಯೇಕ ಘಟನೆಯಲ್ಲಿ, ಹೈದರಾಬಾದ್‌ಗೆ ಹೊರಟಿದ್ದ ಲುಫ್ತಾನ್ಸಾ ವಿಮಾನವು ಬಾಂಬ್ ಬೆದರಿಕೆಯಿಂದಾಗಿ ನಿನ್ನೆ ಸಂಜೆ ಯು-ಟರ್ನ್ ತೆಗೆದುಕೊಂಡು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಹಿಂತಿರುಗಿತು ಎಂದು ಮೂಲಗಳು ತಿಳಿಸಿವೆ. ಭಾನುವಾರ ಸ್ಥಳೀಯ ಸಮಯ ಮಧ್ಯಾಹ್ನ 2.14ಕ್ಕೆ ಜರ್ಮನ್ ನಗರದಿಂದ ಹೊರಟ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಸೋಮವಾರ ಮುಂಜಾನೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಈ ವಿಮಾನವು ಟೇಕ್ ಆಫ್ ಆದ ಸುಮಾರು ಎರಡು ಗಂಟೆಗಳ ನಂತರ ಬಾಂಬ್ ಬೆದರಿಕೆ ಬಂದಿತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ವಾಪಾಸಾಯಿತು.

ಆದಾಗ್ಯೂ, ಹೈದರಾಬಾದ್‌ನಲ್ಲಿ ಇಳಿಯಲು ಪರವಾನಗಿ ಸಿಗದ ಕಾರಣ ಹಿಂತಿರುಗಬೇಕಾಯಿತು ಎಂದು ಲುಫ್ಥಾನ್ಸಾ, ಸುದ್ದಿ ಸಂಸ್ಥೆ ಎಎನ್​ಐಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಗುರುವಾರ (ಜೂನ್​ 12) ಮಧ್ಯಾಹ್ನ 1.39ಕ್ಕೆ ಟೇಕಾಫ್​ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 29 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಮೃತಪಟ್ಟರು.