Saturday, March 14, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಸಾಯಿ ಕಲಾ ಯಕ್ಷ ಬಳಗ ಡಾ. ಶಿವರಾಮ ಕಾರಂತ ಬಾಲವನ ಪುತ್ತೂರು ತಂಡದಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ನಡೆದ ಹಿರಿಯರ ನೆನಪು ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಸಾಯಿ ಕಲಾ ಯಕ್ಷ ಬಳಗ ಡಾಕ್ಟರ್ ಶಿವರಾಮ ಕಾರಂತ ಬಾಲವನ ಪುತ್ತೂರು ತಂಡದಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಹಿರಿಯರ ನೆನಪು ಕಾರ್ಯಕ್ರಮವು ಶಾರದ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ರಾಮ ಕಲ್ಲೂರಾಯ ಅರ್ಚಕರು ಸರ್ವೇ ಸುಬ್ರಹ್ಮಣ್ಯ ದೇವಸ್ಥಾನ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷರಾಗಿ ಕೃಷ್ಣಪ್ಪ ಕಿನ್ಯ ಸದಸ್ಯರು ಯಕ್ಷಗಾನ ಅಕಾಡೆಮಿ ಬೆಂಗಳೂರು,ವಿಶೇಷ ಉಪಸ್ಥಿತಿ ಶ್ರೀ ಸೀತಾರಾಮ ರೈ ಗೌರವ ಅಧ್ಯಕ್ಷರು ಶಾರದ ಭಜನಾ ಮಂದಿರ ಪುತ್ತೂರು , ಡಾಕ್ಟರ್ ಅನಿಲಾ ಮೇಡಂ ( ದಿ. ಡಾಕ್ಟರ್ .ಶ್ರೀಧರ ಭಂಡಾರಿ ಅವರ ಮಗಳು) ಹಾಗೂ ಡಾಕ್ಟರ್ ತಾರಾನಾಥ ವರ್ಕಾಡಿ ಪ್ರಸಿದ್ಧ ಯಕ್ಷಗಾನ ಕಲಾವಿದರು ಇವರುಗಳ ಉಪಸ್ಥಿತಿಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು

ಇನ್ನು ಈ ಕಾರ್ಯಕ್ರಮವನ್ನು ಶ್ರೀ ಸಾಯಿ ಕಲಾ ಯಕ್ಷ ಬಳಗದ ಪ್ರೇಮಾ ಕಿಶೋರ್ ಪ್ರಸ್ಥಾಪಿಸಿ, ಡಾಕ್ಟರ್ ಅನನ್ಯ ಲಕ್ಷ್ಮಿ ಸಂದೀಪ್ ನಿರೂಪಣೆ ಮಾಡಿದರು. ಸಂದೀಪ್ ರೈ ಕಲ್ಲಂಗಳ ಪ್ರಾರ್ಥನೆ ಮಾಡಿದರು.

ತದನಂತರ ಡಾಕ್ಟರ್ ತಾರಾನಾಥ ವರ್ಕಾಡಿ ಇವರು ದಿವಂಗತ ಡಾಕ್ಟರ್ ಶ್ರೀಧರ ಭಂಡಾರಿ ಪುತ್ತೂರು ಹಾಗು ದಿವಂಗತ ಗಂಗಾಧರ ಜೋಗಿ ಪುತ್ತೂರು ಇವರ ನೆನಪುಗಳನ್ನು ಹಂಚಿಕೊAಡರು.

ಆ ಬಳಿಕ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ತಾರಾನಾಥ ವರ್ಕಾಡಿ ಇವರನ್ನು ಸನ್ಮಾನಿಸಾಯಿತು. ಸಾಯಿ ಕಲಾ ಯಕ್ಷ ಬಳಗ ದ ಜ್ಯೋತಿ ಅಶೋಕ್ ಕೆದಿಲ ಧನ್ಯವಾದ ಸಮರ್ಪಿಸಿದರು. ತದನಂತರ ವೀರಮಣಿ ಕಾಳಗ ತಾಳಮದ್ದಲೆ ನಡೆಯಿತು.

ಹಿಮ್ಮೇಳ, ಭಾಗವತರಾಗಿ ಹೇಮ ಸ್ವಾತಿ ಕುರಿಯ್ಯಾಜೆ, ರಚನಾ ಚಿದ್ಗಲ್ , ಚೆಂಡೆ ಮದ್ದಳೆ ಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಹರಿಪ್ರಸಾದ್ ಶೆಟ್ಟಿ ಇಚ್ಲಂಪಾಡಿ , ಚಕೃತಾಳ ಚೈತಲಿ ಕಾಂಚೋದ್, ಮುಮ್ಮೇಳದಲ್ಲಿ ಶತ್ರುಘ್ನ ಜ್ಯೋತಿ ಅಶೋಕ್ ಕೆದಿಲ, ವೀರಮಣಿ ಡಾಕ್ಟರ್ ಅನನ್ಯ ಲಕ್ಷ್ಮಿ, ಹನುಮಂತ ಆಡಿ ತಾರಾನಾಥ ವರ್ಕಾಡಿ , ಈಶ್ವರ ಪ್ರೇಮಾ ಕಿಶೋರ್,  ರುಕ್ಮಾಂಗ ಚೈತಾಲಿ , ಶ್ರೀ ರಾಮ ಜ್ಯೋತಿ ಅಶೋಕ್, ಭಾಗವಹಿಸಿದ್ದರು.