Thursday, March 12, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾಜ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಚುನಾವಣೆ  :  ಹಿತಾ ಶ್ರೀ ಶಾಲಾ ನಾಯಕಿ ,   ಲಿಖಿತಾ ಕೆ ಎಸ್ ಶಾಲಾ ಉಪನಾಯಕಿ,  ಆದಿತ್ಯ ನಾಯಕ್ ವಿರೋಧ ಪಕ್ಷದ ನಾಯಕ

ದ. ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಸಾಜ ಇಲ್ಲಿನ 2025-26 ನೇ ಸಾಲಿನ  ಶಾಲಾ ಮಂತ್ರಿಮಂಡಲವನ್ನು ರಚನೆ ಮಾಡಲಾಯಿತು.

ಮುಖ್ಯಮಂತ್ರಿಯಾಗಿ ಹಿತ ಶ್ರೀ ಏಳನೇ ತರಗತಿ, ಉಪಮುಖ್ಯಮಂತ್ರಿಯಾಗಿ ಲಿಖಿತ ಕೆಎಸ್, ವಿರೋಧ ಪಕ್ಷದ ನಾಯಕರಾಗಿ ಆದಿತ್ಯ ನಾಯಕ್ ಆಯ್ಕೆಯಾದರು.  ನಂತರ ಸಚಿವ ಸಂಪುಟದ ರಚನೆಯಲ್ಲಿ ಶಿಕ್ಷಣ ಮಂತ್ರಿಯಾಗಿ ಕೀರ್ತಿ ಕೆ  ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಧನುಷ್ ಕೆ  ಆರೋಗ್ಯಮಂತ್ರಿಯಾಗಿ ಹಂಶಿಕ ಎಸ್ ಸ್ವಚ್ಛತಾ ಮಂತ್ರಿಯಾಗಿ ಗೌತಮ್ ಎಂ ಇವರನ್ನು ಆಯ್ಕೆ ಮಾಡಲಾಯಿತು.ಪ್ರಜಾಪ್ರಭುತ್ವದ ಅರಿವು ಸಂಪೂರ್ಣ ಗೌಪ್ಯ ಚುನಾವಣೆಯ ಮಹತ್ವವನ್ನು ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ನಡೆಸಲಾದ ಚುನಾವಣೆಯಲ್ಲಿ ಸಹ ಶಿಕ್ಷಕಿ ಸುವರ್ಣ ಲತಾ ಪಿ  ಪ್ರಿಸೈಡಿಂಗ್  ಅಧಿಕಾರಿಯಾಗಿಯೂ, ಕವಿತಾ ಎಚ್ ಎಲ್ ಹಾಗೂ ಉಷಾ ಪೋಲಿಂಗ್ ಅಧಿಕಾರಿಗಳಾಗಿ ಸಹಕರಿಸಿದರು ಮುಖ್ಯೋಪಾಧ್ಯಾಯರಾದ ಶಶಿಕಾಂತ ಸಿ ಇವರು ಚುನಾವಣೆಯಅಧಿಕಾರಿಯಾಗಿಯೂ ನಂತರ ಮಂತ್ರಿಮಂಡಲ ಪುನರ್ ರಚನೆಯ ಬಳಿಕ ಪ್ರಮಾಣ ವಚನವನ್ನು ಬೋಧಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು