Thursday, March 12, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಾಜಿ ಶಾಸಕ ಮೊಹಿಯುದ್ದೀನ್ ಬಾವ ವಿರುದ್ಧ FIR ದಾಖಲು -ಕಹಳೆ ನ್ಯೂಸ್

ಮಂಗಳೂರು: ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಾಜಿ ಶಾಸಕ ಮೋಹಿಯುದ್ದೀನ್ ಬಾವ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೊಹಿಯುದ್ದೀನ್ ಬಾವ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾಮಗಾರಿಯೊಂದರ ಬಿಲ್ ಮಂಜೂರು ಮಾಡುವ ವಿಚಾರವಾಗಿ  ಮಂಗಳೂರು ಬಂದರು ಪ್ರಾಧಿಕಾರ ಉಪಾಧ್ಯಕ್ಷರ ಕಚೇರಿಗೆ ಇಬ್ಬರು ಸಹಚರರೊಂದಿಗೆ ನುಗ್ಗಿ ಗಲಾಟೆ ನಡೆಸಿದ್ದರು.

ಜಾಹೀರಾತು
ಜಾಹೀರಾತು

ಅಲ್ಲದೇ ಅಲ್ಲಿನ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಪ್ರಾಧಿಕಾರದ ಉಪಾಧ್ಯಕ್ಷರು ಹೊರಹೋಗಲು ಬಿಡದೇ ಅವರನ್ನು ತಡೆದು ನಿಲ್ಲಿಸಿದ್ದಾರೆ. ಗಲಾಟೆ ಬೆದರಿಕೆ ಹಾಕಿದ್ದಾರೆ. ಬೇರೆ ಕರ್ತವ್ಯಕ್ಕೆಂದು ಕಾರಿನಲ್ಲಿ ತೆರಳುತ್ತಿದ್ದಾಗಲೂ ಅವರನ್ನು ತಡೆದು ನಿಲ್ಲಿಸಿ ವಾಗ್ವಾದ ನಡೆಸಿದ್ದಾರೆ. ಈ ಬಗ್ಗೆ ಎನ್.ಎಂ.ಪಿ.ಎ ಕಾರ್ಯದರ್ಶಿ ಪಣಂಬೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.