
ಪುತ್ತೂರು: “ಶಿಕ್ಷಣ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ವೇದಿಕೆಯನ್ನು ಒದಗಿಸಿದಾಗ ಗ್ರಾಮೀಣ ಪ್ರದೇಶಗಳು ತಮ್ಮ ಬೆಳವಣಿಗೆಯ ನಿರೀಕ್ಷೆಗಳನ್ನು ಸುಧಾರಿಸಲು ಸಹಾಯವಾಗುತ್ತದೆ.ಇದಕ್ಕೆ ಪೂರಕವಾಗಿ ಗ್ರಾಮವಿಕಾಸ ಸಮಿತಿಯ ಯೋಜನೆಗಳು ಕರ‍್ಯನಿರ್ವಹಿಸುತ್ತದೆ.ಗ್ರಾಮೀಣ ಪ್ರಗತಿಯಿಂದ ಮಾತ್ರ ರಾಷ್ಟ್ರವು ಅಭಿವದ್ಧಿಯ ಪಥದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. “ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಮುಖ್ಯ ಕರ‍್ಯನಿರ್ವಾಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ರವರು ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನ ಗ್ರಾಮ ವಿಕಾಸ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರಪ.ಪೂ.ಕಾಲೇಜಿನ ಕುರಿಯ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾಗಿದ್ದ ಬೂಡಿಯಾರು ರಾಧಾಕೃಷ್ಣ ರೈ ಇವರು 2025-26 ನೇ ಸಾಲಿನ ನೂತನ ಸಮಿತಿಯ ರಚನೆಯನ್ನು ಅಧಿಕೃತವಾಗಿ ಘೋಷಿಸಿದರು.
ಅಧ್ಯಕ್ಷರಾಗಿ ರವೀಂದ್ರನಾಥ ರೈ, ಉಪಾಧ್ಯಕ್ಷರಾಗಿ ಮೋಹನ್ ಪಾಟಾಳಿ ಮತ್ತು ಶ್ರೀಮತಿ ರಮ್ಯಾ, ಕರ‍್ಯದರ್ಶಿಗಳಾಗಿ ಕೀರ್ತಿ
ನಕ್ಷತ್ರಿತ್ತಾಯ, ಜೊತೆ ಕರ‍್ಯದರ್ಶಿಗಳಾಗಿ ಶ್ರೀಮತಿ ಸುಕನ್ಯಾ ಮತ್ತು ಶ್ರೀಕೃಷ್ಣ ,ಸದಸ್ಯರಾಗಿ ಜಯರಾಜ್ ಭಂಡಾರಿ, ಗಣೇಶ್ ರೈ ಬೂಡಿಯಾರು, ಮಧು, ಧನರಾಜ್, ಶಶಿಧರ ಕಿನ್ನಿಮಜಲು, ಚಂದ್ರಹಾಸ ರೈ, ಸುರೇಂದ್ರ ರೈ, ಸತೀಶ್ ರೈ, ನವೀನ್ ಕುಮಾರ್ ರೈ, ವಿಜಯ ಹರಿ ರೈ ಆಯ್ಕೆಯಾಗಿದ್ದಾರೆ.
ಈ ಕರ‍್ಯಕ್ರಮದಲ್ಲಿ ನರೇಂದ್ರ ಪ.ಪೂ.ಕಾಲೇಜು ಮತ್ತು ಕುರಿಯಗ್ರಾಮ ವಿಕಾಸ ಸಮಿತಿ ವತಿಯಿಂದ ಈ ವರ್ಷ ಆಯೋಜಿಸಲಿರುವ ಕರ‍್ಯಕ್ರಮಗಳ ಕುರಿತು ನಿರ್ಧರಿಸಲಾಯಿತು.ಈ ಕರ‍್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ
ಸAಚಾಲಕರಾದ ಸಂತೋಷ ಬಿ.,ಸದಸ್ಯರಾದ ಉಮೇಶ್ ನಾಯಕ್, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ಕಳೆದ ಸಾಲಿನ ಗ್ರಾಮವಿಕಾಸ ಸಮಿತಿಯ ಪ್ರಧಾನ ಕರ‍್ಯದರ್ಶಿಗಳಾದ ರೇಖನಾಥ ರೈ ಇವರು ಉಪಸ್ಥಿತರಿದ್ದರು.
ಕಾಲೇಜಿನ ಗ್ರಾಮವಿಕಾಸ ಸಮಿತಿಯ ಸಂಯೋಜಕರಾದ ಉಪನ್ಯಾಸಕರಾದ ಕಾರ್ತಿಕ್ ಕುಮಾರ್ ಇವರು ಕರ‍್ಯಕ್ರಮದಲ್ಲಿ
ಸ್ವಾಗತಿಸಿ, ವಂದಿಸಿದರು. ಕಾಲೇಜಿನ ಸಿಬ್ಬಂದಿ ವರ್ಗದವರಾದ ಸತೀಶ್ ಸಹಕರಿಸಿದರು.














