ಜೂ.12 ರಂದು ಶ್ರೀರಾಮ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಭವನ ‘ವಿಕ್ರಮಾದಿತ್ಯ’ ಇದರ ಲೋಕಾರ್ಪಣೆ -ಕಹಳೆ ನ್ಯೂಸ್

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ನೂತನ ಸಂಸ್ಥೆಯಾಗಿ ರೂಪುಗೊಳ್ಳಲಿರುವ ಶ್ರೀರಾಮ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಭವನ ‘ವಿಕ್ರಮಾದಿತ್ಯ’ ಇದರ ಲೋಕಾರ್ಪಣೆಯು ಜೂ.12 ರಂದು ನೆರವೇರಲಿದೆ.
ಮಾನವೀಯ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರು ಹಾಗೂ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಕಲಬುರ್ಗಿ ಇದರ ಕುಲಾಧಿಪತಿಗಳು ಆದ ಸದ್ಗುರು ಶ್ರೀ ಮಧುಸೂದನ ಸಾಯಿ ಇವರು ಕಟ್ಟಡದ ಲೋಕಾರ್ಪಣೆಗೈಯಲಿದ್ದಾರೆ. ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರು ಉದ್ಯಮಿಗಳಾದ ಅಶೋಕ್ ಖೇಣಿ ಹಾಗೂ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿಧರ್ ಶೆಟ್ಟಿ ಬರೋಡ ಇವರು ಗಳು ಭಾಗವಹಿಸಲಿದ್ದಾರೆ. ಶ್ರೀರಾಮ ವಿದ್ಯಾ ಕೇಂದ್ರದ ಪರಿಸರದಲ್ಲಿ ಕಟ್ಟಡ ಲೋಕಾರ್ಪಣೆಯ ಬಳಿಕ ಸಭಾ ಕಾರ್ಯಕ್ರಮವು ಕಲ್ಲಡ್ಕದ ಶ್ರೀರಾಮ ಮಂದಿರದ ‘ಶ್ರೀರಾಮಾಂಗಣ’ ದಲ್ಲಿ ನಡೆಯಲಿದೆ ಎಂದು ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರ ಪ್ರಕಟಣೆ ತಿಳಿಸಿದೆ.














