
ಚಿಕ್ಕಮಗಳೂರು: ಕುಟುಂಬಸ್ಥರ ಜೊತೆ ಕಳೆದ ಜನವರಿಯಲ್ಲಿ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳಕ್ಕೆ ತೆರಳಿ ನಾಪತ್ತೆಯಾಗಿದ್ದ ಅರ್ಚಕರೊಬ್ಬರು ಬರೋಬ್ಬರಿ ಆರು ತಿಂಗಳ ಬಳಿಕ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.
ಕಡೂರು ತಾಲೂಕಿನ ತಂಗಲಿ ಗ್ರಾಮದ ನರಸಿಂಹಮೂರ್ತಿ ಆರು ತಿಂಗಳ ಬಳಿಕ ಮನೆಗೆ ವಾಪಸ್ಸಾದ ವ್ಯಕ್ತಿ.
ತಂಗಲಿ ಗ್ರಾಮದ ಚನ್ನಕೇಶವ ಸ್ವಾಮಿ ದೇವಾಲಯದ ಅರ್ಚಕನಾಗಿರುವ ನರಸಿಂಹಮೂರ್ತಿ ಅವರು ಪುತ್ರ ಬದರೀನಾಥ್ ಜೊತೆ ಕುಟುಂಬ ಸಮೇತ ಕುಂಭ ಮೇಳಕ್ಕೆ ಹೋಗಿದ್ದರು ಈ ವೇಳೆ ಜನವರಿ 28 ರಂದು ಪ್ರಯಾಗ್ ರಾಜ್ ನಲ್ಲಿ ನರಸಿಂಹಮೂರ್ತಿ ಕುಟುಂಬಸ್ಥರ ಕೈತಪ್ಪಿ ಹೋಗಿದ್ದಾರೆ ಆ ಬಳಿಕ ಎಷ್ಟೇ ಹುಡುಕಿದರೂ ನರಸಿಂಹಮೂರ್ತಿ ಮಾತ್ರ ಪತ್ತೆಯಾಗಿರಲಿಲ್ಲ ಇದಾದ ಬಳಿಕ 3-4 ದಿನ ಹುಡುಕಿದ ಪುತ್ರ ಬದರೀನಾಥ್. ಕುಟುಂಬದೊಂದಿಗೆ ಊರಿಗೆ ವಾಪಸ್ಸಾಗಿ ಬಳಿಕ ಮತ್ತೆ ತಂದೆಯನ್ನು ಹುಡುಕಲು ಪ್ರಯಾಗ್ ರಾಜ್ ಗೆ ತೆರಳಿದ್ದರು ಆಗಲೂ ಕೆಲ ದಿನಗಳ ಹುಡುಕಾಟ ನಡೆಸಿದ್ದು ಆಗಲೂ ನರಸಿಂಹಮೂರ್ತಿ ಪತ್ತೆಯಾಗಲಿಲ್ಲ ಬಳಿಕ ಮಗ ಬದರೀನಾಥ್ ಮನೆಗೆ ವಾಪಸ್ಸಾಗಿದ್ದಾರೆ. ಇದಾದ ಆರು ತಿಂಗಳ ಬಳಿಕ ನಾಪತ್ತೆಯಾಗಿದ್ದ ನರಸಿಂಹಮೂರ್ತಿ ಮನೆಗೆ ವಾಪಸ್ಸಾಗಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ತನ್ನ ಕುಟುಂಬಸ್ಥರಿಂದ ದೂರವಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನರಸಿಂಹಮೂರ್ತಿ ಅವರನ್ನು ಮುಂಬೈನ ಶಾರದಾ ರಿಹ್ಯಾಬಿಲಿಟೇಷನ್ ಸಂಸ್ಥೆಯ ಆಶ್ರಯದಲ್ಲಿದ್ದರು ಇದಾದ ಬಳಿಕ ಈ ಸಂಸ್ಥೆಯ ಸಹಾಯದಿಂದಲೇ ನರಸಿಂಹಮೂರ್ತಿ ಅವರು ಕುಟುಂಬವನ್ನು ಸೇರಿಕೊಂಡಿದ್ದಾರೆ.














