Sunday, March 8, 2026
ಕೇರಳಜಿಲ್ಲೆರಾಜ್ಯಸುದ್ದಿ

2 ಶತಮಾನಗಳ ಬಳಿಕ ಪದ್ಮನಾಭ ದೇಗುಲ ಮಹಾಕುಂಭಾಭಿಷೇಕ -ಕಹಳೆ ನ್ಯೂಸ್

ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ 2 ಶತಮಾನಗಳ ಬಳಿಕ ಮಹಾ ಕುಂಭಾಭಿಷೇಕ ನಡೆದಿದ್ದು, ಭಾನುವಾರ ಭಕ್ತರು ಈ ಅಪರೂಪದ ಆಚರಣೆಯನ್ನು ಕಣ್ತುಂಬಿಕೊಂಡರು. ಸಾಕಷ್ಟು ಸಮಯದಿಂದ ವಿಳಂಬವಾಗಿದ್ದ ಈ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯವು ಇತ್ತೀಚೆಗೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 270 ವರ್ಷಗಳ ಬಳಿಕ ಈ ಅದ್ದೂರಿ ಮಹಾಕುಂಭಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅದರಂತೆ ಭಾನುವಾರ ಬೆಳಗ್ಗೆ ದೇವಾಲಯದ ಆವರಣದಲ್ಲೇ ಇರುವ ತಿರುವಾಂಬಾಡಿ ಕೃಷ್ಣ ದೇಗುಲಕ್ಕೆ ಅಷ್ಟಬಂಧ ಕಳಶ ಸ್ಥಾಪನೆ, ವಿಶ್ವಕಸೇನಾ ಮೂರ್ತಿ ಮರುಸ್ಥಾಪನೆ ಹಾಗೂ ಗೋಪುರದ ಮೇಲಿನ ಕಳಶದ ಸ್ಥಾಪನೆ ಕಾರ್ಯಕ್ರಮಗಳು ಜರುಗಿದವು ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು