Recent Posts

Tuesday, March 10, 2026
ಸಂತಾಪಸುದ್ದಿ

ತೆಂಕು ತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ ನಿಧನ 

ಮುಂಡಾಜೆ: ತೆಂಕು ತಿಟ್ಟಿನ ಯಕ್ಷಗಾನ ವೇಷ ಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67ವರ್ಷ ) ಜೂ. 7ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.

ಕಟೀಲು ಮೇಳದಲ್ಲಿ ಕಳೆದ 20 ವರ್ಷ ಗಳಿಂದ ವೇಷ ಧಾರಿ ಯಾಗಿ, 3ನೇ ಮೇಳದ ಪ್ರಬಂಧಕ ರಾಗಿ ಸೇವೆ ಸಲ್ಲಿಸಿದ್ದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗ ಗಳಲ್ಲಿ ಎಲ್ಲಾ ಸ್ವರೂಪದ ಪಾತ್ರ ಗಳನ್ನು ನಿರ್ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯುನ್ಮತಿ ಕಲ್ಯಾಣ ಪ್ರಸಂಗ ಪುಸ್ತಕದಲ್ಲಿ ಮುಂಡಾಜೆ ಅವರ ಸ್ತ್ರೀ ವೇಷದ ಚಿತ್ರ ಮುಖ ಪುಟದಲ್ಲಿದ್ದು ಅವರ ವೇಷದ ಸರಣಿಯ ದಾಖಲಾತಿ ಒದಗಿಸುತ್ತದೆ. ಪುಂಡು, ರಾಜವೇಶ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು