Friday, March 13, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜೂ.09ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವರ್ಣ ಪಾದುಕಾ ಪೂಜೆ ಹಾಗೂ ಶ್ರೀಗುರುಪರಂಪರಾ ಭಿಕ್ಷಾ ಸೇವೆ – ಕಹಳೆ ನ್ಯೂಸ್

ಪುತ್ತೂರು : ಇದೇ ಬರುವ ಜೂನ್ 9ನೇ ತಾರೀಕು ಸೋಮವಾರ, ಬೆಳಗ್ಗೆ 9:30 ರಿಂದ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀರಾಮಚಂದ್ರಾಪುರ ಮಠದ ಗುರುಪರಂಪರೆಯ ಅತ್ಯಪೂರ್ವವಾದ ಸ್ವರ್ಣ ಪಾದುಕಾ ಪೂಜೆ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ವತಿಯಿಂದ ಶ್ರೀಗುರುಪರಂಪರಾ ಭಿಕ್ಷಾ ಸೇವೆ ನಡೆಯಲಿದೆ.

ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರ ಮಠ ಇವರಿಂದ ಅನುಗ್ರಹಿಸಲ್ಪಟ್ಟು 36 ಯತಿಗಳ ದಿವ್ಯಸಾನ್ನಿಧ್ಯ ಹೊಂದಿದ ಸ್ವರ್ಣಪಾದುಕೆಗೆ ಸ್ವರ್ಣ ಪಾದುಕಾ ಪೂಜೆ ಹಾಗೂ ಶ್ರೀಗುರುಪರಂಪರಾ ಭಿಕ್ಷಾ ಸೇವೆ ನಡೆಯಲಿದೆ.
ಜೂ.08ರ ಆದಿತ್ಯವಾರ ಬೆಳಿಗ್ಗೆ ಸ್ವರ್ಣಪಾದುಕೆ ಆಗಮನ, ಸ್ವಾಗತ, ಧೂಳಿಪೂಜೆ ನಡೆದು ಬಳಿಕ ಜೂ.09ರಂದು ಭಿಕ್ಷಾಂಗ ಪಾದುಕಾಪೂಜೆ, ದೇವರಾಜೋಪಚಾರ ಪೂಜೆ, ಮಂಗಳಾರತಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭಗವಗ್ಭತರು ಕುಟುಂಬ ಸಮೇತರಾಗಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ಭಿಕ್ಷಾ ಸೇವೆಯ ನಂತರ ಭೋಜನದ ವ್ಯವಸ್ಥೆ ಇದೆ.

ವಿ.ಸೂ.: ಮಂಗಳಾರತಿ ನಂತರ ಸ್ವರ್ಣಪಾದುಕೆಯನ್ನು ಎಲ್ಲರೂ ಸ್ಪರ್ಶಿಸಿ ನಮಸ್ಕರಿಸಲು ಹಾಗೂ ಫಲ ಸಮರ್ಪಿಸಲು ಅವಕಾಶವಿರುತ್ತದೆ.