Thursday, March 12, 2026
ದಕ್ಷಿಣ ಕನ್ನಡಬೆಂಗಳೂರುಮಂಗಳೂರುಸುದ್ದಿ

ಮಂಗಳೂರು ಕೇಂದ್ರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಶಾಸಕ ಭಂಡಾರಿ ಒತ್ತಾಯ -ಕಹಳೆ ನ್ಯೂಸ್

ಮಂಗಳೂರು: ನಗರ ಕೇಂದ್ರ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದು ಹಾಗೂ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.

ಮಂಗಳೂರು ನಗರವು ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದಾಗಿದ್ದು, ಅಭಿವೃದ್ಧಿಗೆ ಪೂರಕವಾದ ವಾಣಿಜ್ಯ ಚಟುವಟಿಗಳಿಂದಾಗಿ ಕರ್ನಾಟಕದ ಬಂದರು ನಗರಿಯಾಗಿ ಹಾಗೂ ಪ್ರಮುಖ ರೇವು ಪಟ್ಟಣವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ದೇಶ-ವಿದೇಶಗಳಿಂದಲೂ ಸಾವಿರಾರು ಜನ ಪ್ರತಿನಿತ್ಯ ನಗರಕ್ಕೆ ಭೇಟಿ ನೀಡುತ್ತಾರೆ. ಮಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣವು 1980 ರಲ್ಲಿ ಮಂಜೂರಾಗಿ 1986ರಲ್ಲಿ ಅಂದಾಜು 60 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರುತ್ತದೆ. ಪ್ರಸ್ತುತ ಬಸ್ ನಿಲ್ದಾಣವು 3 ಎಕರೆ 60 ಸೆಂಟ್ಸ್ ವಿಸ್ತೀರ್ಣದ ಪ್ರದೇಶವನ್ನು ಹೊಂದಿದ್ದು, 4,702.94 ಚ.ಮೀ ವಿಸ್ತೀರ್ಣದ ನಿಲ್ದಾಣ ಕಟ್ಟಡ, 814.82 ಚ.ಮೀ ವಾಣಿಜ್ಯ ಪ್ರದೇಶ, 305 ಚ.ಮೀ ದ್ವಿಚಕ್ರ ವಾಹನ ಪಾರ್ಕಿಂಗ್, 608.50 ಚ.ಮೀ ಕಾರ್ ಪಾರ್ಕಿಂಗ್, 171.9 ಚ.ಮೀ ರಿಕ್ಷಾ ನಿಲ್ದಾಣ, 1,564.82 ಚ.ಮೀ ವಿಶ್ರಾಂತಿ ಕೊಠಡಿಗಳ ಸಾಮರ್ಥ್ಯವನ್ನು ಹೊಂದಿದೆ. ಕಳೆದ 39 ವರ್ಷಗಳಲ್ಲಿ ಅಲ್ಪ ಸ್ವಲ್ಪ ಅನುದಾನದಿಂದ ನಿಲ್ದಾಣವನ್ನು ನಿರ್ವಹಣೆ ಮಾಡಲಾಗಿದೆಯೇ ಹೊರತು ಆಧುನಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸುವ ಯಾವುದೇ ಪ್ರಯತ್ನಗಳಾಗಿರುವುದಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು

ನಿಲ್ದಾಣಕ್ಕೆ ಪ್ರತಿನಿತ್ಯ ವಿವಿಧ ವಿಭಾಗಗಳಿಂದ ಅಂದಾಜು 585 ಬಸ್‌ಗಳು ಬಂದು ಹೋಗುತ್ತಿದ್ದು, ಸರಿಸುಮಾರು 25,000 ಪ್ರಯಾಣಿಕರು ನಿತ್ಯ ನಿಲ್ದಾಣವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ವಿವಿಧ ಉದ್ಯಮಗಳ ಮೂಲಕ ಅತೀ ಹೆಚ್ಚು ತೆರಿಗೆ ಪಾವತಿಸುವ ಜನರು ಹಾಗೂ ಸಂಸ್ಥೆಗಳನ್ನು ಹೊಂದಿರುವ ನಗರಗಳಲ್ಲಿ ಒಂದಾಗಿರುವ ಮಂಗಳೂರಿನಲ್ಲಿ, ಕಾಲಮಾನಕ್ಕೆ ತಕ್ಕಂತೆ ನಿಲ್ದಾಣದ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಿ, ಇತರೇ ರಾಜ್ಯದಲ್ಲಿರುವಂತೆ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕೆಂಬುದು ಮಂಗಳೂರಿನ ನಿವಾಸಿಗಳ ಹಾಗೂ ಪಕ್ಷದ ಮುಖಂಡರ ಆಗ್ರಹವಾಗಿದೆ. ಆದ್ದರಿಂದ ಮಂಗಳೂರು ಬಸ್ ನಿಲ್ದಾಣವನ್ನು ಇತರೇ ಜಿಲ್ಲೆಯಲ್ಲಿರುವಂತೆ, ಅಂದಾಜು 120 ಕೋಟಿ ರೂಪಾಯಿ ಅನುದಾನದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಹೈಟೆಕ್ ಬಸ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವುದರ ಜೊತೆಗೆ ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಬೇಕಾಗಿ ಈ ಮೂಲಕ ತಮ್ಮನ್ನು ಮನವಿ ಮಾಡುವುದಾಗಿ ಭಂಡಾರಿ ಹೇಳಿದ್ದಾರೆ.