
ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ‘ವಿತ್ತ ನೀತಿ ಸಮಿತಿ’ (MPC) ಸಭೆಯಲ್ಲಿ ಬಡ್ಡಿದರಗಳ ಕುರಿತು ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತ ನೀತಿ ಸಮಿತಿ (MPC) ಸಭೆ ಎರಡು ತಿಂಗಳಿಗೊಮ್ಮೆ ನಡೆಯುವ ಹಣಕಾಸು ಪರಿಶೀಲನಾ ಸಮಿತಿಯ (MPC) ಮೂರು ದಿನಗಳ ಸಭೆ ಕೊನೆಗೊಂಡಿದೆ.
ಇದರ ಅಡಿಯಲ್ಲಿ, 6 ಸದಸ್ಯರ ಸಮಿತಿಯು ಬಡ್ಡಿದರಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ. ಸಮಿತಿಯ ಅಧ್ಯಕ್ಷ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ದರ ಕಡಿತದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಈ ಹಿಂದೆ ಸತತ ಎರಡು ಬಾರಿ ರೆಪೋ ದರದಲ್ಲಿಇಳಿಕೆಯನ್ನು ಮಾಡಲಾಗಿತ್ತು. ಇದೀಗ ಜೂನ್ ನೀತಿಯಲ್ಲಿ ಬಡ್ಡಿದರಗಳಲ್ಲಿ 50 ಬೇಸಿಸ್ ಪಾಯಿಂಟ್ ಕಡಿತವನ್ನು ಘೋಷಿಸಿದೆ. ದರಗಳನ್ನು ಕಡಿತಗೊಳಿಸುತ್ತಿರುವುದು ಇದು ಸತತ ಮೂರನೇ ಬಾರಿ ಕೂಡ ಬಟ್ಟಿದರವನ್ನು ಇಳಿಕೆ ಮಾಡಿದೆ.
ನೀತಿ ದರಗಳಲ್ಲಿ ಶೇ. 50 ಬೇಸಿಸ್ ಪಾಯಿಂಟ್‌ಗಳ ಕಡಿತಕ್ಕೆ ಅನುಮೋದನೆ ನೀಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಅಂದರೆ, ಈಗ ನೀತಿ ದರವು 5.50% ಕ್ಕೆ ಇಳಿದಿದೆ, ಇದು ಏಪ್ರಿಲ್ ನೀತಿಯಲ್ಲಿ ಶೇ6 ರಷ್ಟಿತ್ತು.
ಸಾಲಗಾರರಿಗೆ RBI ಸಿಹಿಸುದ್ದಿ
ಸಾಲಗಾರರಿಗೆ RBI ಸಿಹಿಸುದ್ದಿ ನೀಡಿದ್ದು, ಸತತ ಮೂರನೇ ಬಾರಿಗೆ ಆರ್‌ಬಿಐ ಪ್ರಮುಖ ಸಾಲ ದರವನ್ನು ಕಡಿತಗೊಳಿಸಿದೆ. ಆರ್‌ಬಿಐ ರೆಪೊ ದರವನ್ನು 0.5 ರಷ್ಟು ಕಡಿಮೆ ಮಾಡಿದೆ. ಇದು ರೆಪೊ ದರದಲ್ಲಿ ಸತತ ಮೂರನೇ ಕಡಿತವಾಗಿದೆ. ರೆಪೊ ದರದಲ್ಲಿನ ಕಡಿತದಿಂದಾಗಿ, ಗೃಹ ಸಾಲಗಳು ಸೇರಿದಂತೆ ಎಲ್ಲಾ ಸಾಲಗಳು ಅಗ್ಗವಾಗಲಿದೆ. ಈ ಇಳಿಕೆಯೊಂದಿಗೆ ರೆಪೊ ದರವು 5.5 ಕ್ಕೆ ಇಳಿದಿದೆ














