Friday, March 13, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ರೌಡಿಶೀಟರ್, ಕೊಲೆ ಮಾಡಿದವರು, ಸುಲಿಗೆ ಮಾಡಿದವರನ್ನು ಹಿಂದು ಕಾರ್ಯಕರ್ತ ಅನ್ನುತ್ತೀರಾ..? -ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ-ಕಹಳೆ ನ್ಯೂಸ್

ಮಂಗಳೂರು:ಕೇಸರಿ ಶಾಲು ಹಾಕಿಕೊಂಡು ಹೊಡೆದೊಂಡರೆ ಹಿಂದು ಮುಖಂಡ, ಹಿಂದು ಕಾರ್ಯಕರ್ತ ಆಗುತ್ತಾನಾ.. ರೌಡಿಶೀಟರ್, ಕೊಲೆ ಮಾಡಿದವರು, ಸುಲಿಗೆ ಮಾಡಿದವರನ್ನು ಹಿಂದು ಕಾರ್ಯಕರ್ತ ಅನ್ನುತ್ತೀರಾ.. ಕಾಂಗ್ರೆಸ್ ಸರ್ಕಾರ ಇರುವಾಗ ಮಾತ್ರ ಹಿಂದುಗಳಿಗೆ ತೊಂದರೆ ಆಗಿದ್ದಾ.. ಹಿಂದು ನಾಯಕ ಅನಿಸಿಕೊಳ್ಳಲು ಗಾಂಜಾ, ಅನೈತಿಕ ಚಟುವಟಿಕೆ ಮಾಡಿಕೊಂಡಿದ್ದವರೇ ಆಗಬೇಕಾ..?ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು, ಪೊಲೀಸರು ಬಿಡುಗಡೆ ಮಾಡಿರುವ ಗಡೀಪಾರು ಪಟ್ಟಿಯಲ್ಲಿ ಕೇವಲ ಹತ್ತು ಕಿಮೀ ವ್ಯಾಪ್ತಿಯವರೇ ಹೆಚ್ಚಿದ್ದಾರೆ. ಇಡೀ ಕರಾವಳಿಗೆ ಹತ್ತು ಕಿಮೀ ವ್ಯಾಪ್ತಿಯ ಕೋಮು ಹಿಂಸೆಯ ಜನರಿಂದಾಗಿ ಕೆಟ್ಟ ಹೆಸರು ಬರ್ತಾ ಇದೆ. 30 ವರ್ಷಗಳ ಹಿಂದೆ ಬಿಜೆಪಿಯವರು ಬಿತ್ತಿದ ಕೋಮು ವೈಷಮ್ಯದ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ.

ಕೋಮು ಗಲಭೆ, ಕೋಮು ಸಂಘರ್ಷ, ಕೋಮು ಹತ್ಯೆ ಬೇರೆ ಬೇರೆ. ಇಲ್ಲಿ ಆಗುತ್ತಿರುವುದು ಕೋಮು ಹತ್ಯೆ ಮಾತ್ರ. ಆದರೆ ಇಡೀ ಕರಾವಳಿಗೆ ಇದರ ನೆಪದಲ್ಲಿ ಮಸಿ ಬಳಿಯಲಾಗುತ್ತಿದೆ. ಮಾಧ್ಯಮದಲ್ಲಿ ಇಡೀ ಕರಾವಳಿಯಲ್ಲಿ ಇಂಥದ್ದು ಆಗ್ತಾ ಇದೆಯೆಂದು ಬಣ್ಣ ಹಚ್ಚಲಾಗುತ್ತಿದೆ ಎಂದು ಆಕ್ಷೇಪಿಸಿದರು..

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು