ಜುಲೈ 10 ರಿಂದ ಸೆಪ್ಟೆಂಬರ್ 07 ರ ವರೆಗೆ ಎಡನೀರು ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ; ಜೂನ್.08 ರಂದು ಚಾತುರ್ಮಾಸ್ಯ ಸಮಿತಿ ಮಹಾಸಭೆ – ಕಹಳೆ ನ್ಯೂಸ್

ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳು ಪಂಚಮ ಚಾತುರ್ಮಾಸ್ಯ ವ್ರತಾಚರಣೆಯು ಜುಲೈ 10 ರಿಂದ ಸೆಪ್ಟೆಂಬರ್ 07 ರ ವರೆಗೆ ನಡೆಯಲಿದೆ.
![]()
ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿಯಾಗಿ ಚಾತುರ್ಮಾಸ್ಯ ಸಮಿತಿಯ ಮಹಾಸಭೆಯು ಜೂನ್ 08 ರಂದು ಸಂಜೆ 4.30 ಕ್ಕೆ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ ಎಂದು ಶ್ರೀಮಠದ ಮ್ಯಾನೇಜರ್ ಹಾಗೂ ಚಾತುರ್ಮಾಸ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.














