Friday, March 13, 2026
ಸುದ್ದಿ

ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು..! -ಕಹಳೆ ನ್ಯೂಸ್

ಬೆಳಗಾವಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಹಾಗಾಗಿ ಆರ್‌ಸಿಬಿ ಅಭಿಮಾನಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯಿಂದ ಬೆಳಗಿನ ನಸುಕಿನ ಜಾವದವರೆಗೂ ಸಂಭ್ರಮಾಚರಣೆ ಮಾಡಿದ್ದಾರೆ.

ಅದೇ ರೀತಿ ಬೆಳಗಾವಿಯಲ್ಲಿ ಸಂಭ್ರಮಾಚರಣೆಯ ವೇಳೆ ಆರ್‌ಸಿಬಿಯ ಕಟ್ಟಾ ಅಭಿಮಾನಿ ಡ್ಯಾನ್ಸ್ ಮಾಡುತ್ತಲೇ, ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಿನ್ನೆ ರಾತ್ರಿ ಆರ್ ಸಿ ಬಿ ಗೆದ್ದ ಬಳಿಕ ಸಂಭ್ರಮಾಚರಣೆಯ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ್ ಈರಪ್ಪ ಕಂಬಾರ್ (28) ಹೃದಯಾಘಾತದಿಂದ ಸಾವನಪ್ಪಿದ್ದಾನೆ. ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆರ್‌ಸಿಬಿ ಗೆಲವು ಸಂಭ್ರಮಾಚರಣೆಯ ವೇಳೆ ಕುಣಿಯುತ್ತಲೇ, ಕುಸಿದು ಬಿದ್ದು ಮಂಜುನಾಥ್ ಸಾವನಪ್ಪಿದ್ದಾನೆ.

ಜಾಹೀರಾತು
ಜಾಹೀರಾತು

ಮೃತ ಮಂಜುನಾಥ ಕೆ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಹುಚ್ಚು ಅದರಲ್ಲೂ ಐಪಿಎಲ್ ಅಂತ ಬಂದರೆ ಆರ್ ಸಿ ಬಿ ಆತನ ನೆಚ್ಚಿನ ತಂಡವಾಗಿತ್ತು. ಅಲ್ಲದೆ ಆರ್‌ಸಿಬಿ ಫೈನಲ್ ಮ್ಯಾಚ್ ಗೋಸ್ಕರ ಎಲ್ಲಾ ರೀತಿಯ ಸ್ಕ್ರೀನ್ ವ್ಯವಸ್ಥೆ ಮಾಡಿದ್ದ. ಆರ್‌ಸಿಬಿ ಗೆದ್ದ ಕೂಡಲೇ ಗ್ರಾಮದ ಯುವಕರೊಂದಿಗೆ ಮಕ್ಕಳೊಂದಿಗೆ ಕುಣಿದು ಸಂಭ್ರಮಾಚರಣೆ ಮಾಡುತ್ತಿರುವ ವೇಳೆ, ಕುಸಿದು ಬಿದ್ದು ಮಂಜುನಾಥ್ ಸಾವನಪ್ಪಿದ್ದಾನೆ. ಮೃತ ಮಂಜುನಾಥ ಗೆ ಆರು ತಿಂಗಳ ಹೆಣ್ಣು ಮಗುವಿದೆ. ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ.