ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಯೋಗ ಶಿಕ್ಷಣದ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ಯಾರು ತನ್ನ ಪರಂಪರೆಯನ್ನು ಸಂಸ್ಕೃತಿಯನ್ನು ಮರೆಯುತ್ತಾನೋ ಅವನು ಔನ್ನತ್ಯವನ್ನು ಹೊಂದುವುದು ಅಸಾಧ್ಯ. ಭಾರತೀಯ ಜೀವನ ಪದ್ಧತಿ
ಭಾರತೀಯ ತತ್ವಶಾಸ್ತçದ ಮೇಲೆ ನಿಂತಿದೆ ಮಾತ್ರವಲ್ಲದೆ ಯೋಗವು ಆಧಾರ ಸ್ತಂಭದAತೆ ತನ್ನ ಸ್ಥಾನವನ್ನು ಹೊಂದಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ
ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ
ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಯೋಗ ಶಿಕ್ಷಣ ತರಗತಿಗಳನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಆರ್ಟ್ ಆಫ್ ಲಿವಿಂಗ್‌ನ ಕುಮಾರ ಸುಬ್ರಹ್ಮಣ್ಯ, ಶರಾವತಿ ರವಿ ನಾರಾಯಣ ಹಾಗೂ ಕಾಲೇಜಿನ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಸಾಯನ ಶಾಸ್ತç ಉಪನ್ಯಾಸಕಿ ಅಕ್ಷತಾ ಎಂ ಸ್ವಾಗತಿಸಿ, ನಿರೂಪಿಸಿದರು.














