
ತೆಲಂಗಾಣ : ಯುವಕನೊಬ್ಬ ಮಹಿಳೆಯನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಂದು, ಶಸ್ತ್ರ ಸಹಿತ ಠಾಣೆಗೆ ಬಂದು ಹಾಜರಾಗಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲಾದಲ್ಲಿ ನಡೆದಿದೆ. ಯಾವುದೇ ಪಾಪಪ್ರಜ್ಞೆ ಇಲ್ಲದೇ ಯುವಕನು ಠಾಣೆಗೆ ಬಂದು ಪೊಲೀಸರ ಎದುರು ಹಾಜರಾಗಿದ್ದಾನೆ.
ಈತ ಠಾಣೆಗೆ ಬಂದಾಗ ಪೊಲೀಸರು ಸಾಯಿಸಿಬಿಟ್ಟೆಯಾ ಎಂದು ಪ್ರಶ್ನಿಸಿದ್ದಕ್ಕೆ ತಲೆಕಾಯಿ ತೀಸೇಸಾನು (ತಲೆಬುರುಡೆ ಒಡೆದು ಹಾಕಿದ್ದೇನೆ) ಎಂದು ಉತ್ತರಿಸಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೃತ ಮಹಿಳೆಯ ಹೆಸರು ದರ್ಜಗಾ ಎಂದು ತಿಳಿದುಬಂದಿದೆ. ಈತ ಆಕೆಯನ್ನು ಯಾತಕ್ಕಾಗಿ ಕೊಂದ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಈತ ಗಣೇಶ ಹಬ್ಬದ ದಿನ ಮತ್ತೊಂದು ವ್ಯಕ್ತಿಯನ್ನು ಕೊಲೆಗೈದು ಜೈಲು ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.














