ಬೆಂಗಳೂರು : ಕೊರೊನಾ ಹೆಚ್ಚಳ : ಶಾಲಾ ಮಕ್ಕಳಿಗೆ ರಜೆ ಕೊಡಲು ಸಿಎಂ ಸೂಚನೆ –ಕಹಳೆ ನ್ಯೂಸ್

ಬೆಂಗಳೂರು; ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆಯಾಗ್ತಾ ಇದಾವೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿಯೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನರಲ್ಲಿ ಆತಂಕ ಕೀಡ ಜಾಸ್ತಿಯಾಗಿದೆ. ಅತ್ತ ಸರ್ಕಾರದಿಂದ ಮುಂಜಾಗ್ರತ ಕ್ರಮದ ಬಗ್ಗೆ ಕಾಳಜಿ ಕೂಡ ವಹಿಸಲಾಗಿದೆ. ಜಾಗೃತಿಯನ್ನು ಮೂಡಿಸಲಾಗಿದೆ.
ಇದೀಗ ಸಿಎಂ ಸಿದ್ದರಾಮಯ್ಯ ಗಂಭೀರವಾದ ನಿರ್ಧಾರವನ್ನ ಮಾಡಿದ್ದಾರೆ.
ಕೊರೊನಾ ವೈರಸ್ ವಿಚಾರಕ್ಕೆ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಈಗಾಗಲೇ ಶಾಲೆಗಳು ಆರಂಭಗೊಂಡಿವೆ. ಮೇ ಅಂತ್ಯದ ವೇಳೆಗೆ ರೆಗ್ಯುಲರ್ ಆಗಲಿವೆ. ಇದೇ ಸಮಯದಲ್ಲಿ ಹೀಗೆ ಕೊರೊನಾ ಜಾಸ್ತಿಯಾಗ್ತಾ ಇರೋದಕ್ಕೆ ಪೋಷಕರು ಆತಂಕಗೊಂಡಿದ್ದಾರೆ. ಯಾಕಂದ್ರೆ ಈ ಕೊರೊನಾ ವೈರಸ್ ಹೆಚ್ಚು ಕಾಡುವುದೇ ಮಕ್ಕಳನ್ನು. ಹೀಗಾಗಿ ಶಾಲೆಗೆ ಬರುವ ಮಕ್ಕಳಲ್ಲಿ ಜ್ವರ, ನೆಗಡಿಯಂತಹ ರೋಗ ಲಕ್ಷಣಗಳು ಕಂಡು ಬಂದರೆ ಅಂಥಹ ಮಕ್ಕಳಿಗೆ ಸ್ವಲ್ಪ ದಿನ ರಜೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಶಾಲಾ ಮಕ್ಕಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಕೆಮ್ಮು, ಜ್ಚರ, ನೆಗಡಿ ಇರುವ ಮಕ್ಕಳನ್ನ ಶಾಲೆಗಳಿಗೆ ಪೋಷಕರು ಕಳುಹಿಸಬಾರದು. ಈ ವೇಳೆ ಮನೆಯಲ್ಲೇ ಮಕ್ಕಳನ್ನ ಉಳಿಸಿಕೊಳ್ಳಬೇಕು. ಜೊತೆಗೆ ವಿದ್ಯಾಸಂಸ್ಥೆಗಳು ಕೂಡ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದ್ದಾರೆ. ಈಗಾಗಲೇ ಲಸಿಕೆಗೆ ಸಂಬಂಧಿಸಿದಂತೆ ಕೇಂಧರ ಸರ್ಕಾರದ ಬಳಿಯೂ ದಿನೇಶ್ ಗುಂಡೂರಾವ್ ಅವರು ಚರ್ಚೆ ನಡೆಸಿದ್ದಾರೆ. ಆದರೆ ಸದ್ಯಕ್ಕೆ ಲಸಿಕೆ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಜನರೇ ಮುಂಜಾಗ್ರತೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ.














