Saturday, March 7, 2026
ಉಡುಪಿಜಿಲ್ಲೆಮೂಡಬಿದಿರೆಶಿಕ್ಷಣಸುದ್ದಿ

ಸಿಇಟಿ ಫಲಿತಾಂಶ : ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್-ಕಹಳೆ ನ್ಯೂಸ್

ಮೂಡುಬಿದಿರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆಯ ಎಕ್ಸಲೆಂಟ್
ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ.

ಶಿಶಿರ್ ಹೆಚ್ ಶೆಟ್ಟಿ ಇ೦ಜಿನಿಯರಿ೦ಗ್ ವಿಭಾಗದಲ್ಲಿ ೪ ನೇ ರ‍್ಯಾಂಕ್, ನೂತನ್ ಕೃಷ್ಣ ಬಿ ಬಿ ಎನ್ ವೈ ಎಸ್ ನಲ್ಲಿ ೪ ನೇ ರ‍್ಯಾಂಕ್, ಬಿ ಫಾರ್ಮ ಮತ್ತು ಫಾರ್ಮಾ ಡಿ ನಲ್ಲಿ ೫ ನೇ ರ‍್ಯಾಂಕ್, ಬಿ ಎಸ್ಸಿ ನರ್ಸಿ೦ಗ್ ಮತ್ತು ವೆಟರಿನರಿ ಸಾಯನ್ಸ್ ನಲ್ಲಿ ೬ ನೇ ರ‍್ಯಾಂಕ್ ನ್ನು ಗಳಿಸಿರುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ನೂರರ ಒಳಗೆ ೧೩ ರ‍್ಯಾಂಕ್, ಐದುನೂರರ ಒಳಗೆ ೩೮ ರ‍್ಯಾಂಕ್, ಸಾವಿರದ ಒಳಗೆ ೬೪ ರ‍್ಯಾಂಕ್ ಗಳನ್ನು ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ
ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ.

ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ ಶೆಟ್ಟಿ, ಮತ್ತು ಉಪನ್ಯಾಸಕ ವೃ೦ದ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.