Sunday, March 8, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಧಾರಾಕಾರ ಮಳೆಯ ನಡುವೆಯೇ ನಡುರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು -ಕಹಳೆ ನ್ಯೂಸ್

ಮಂಗಳೂರು ನಗರದ ಕುಲಶೇಖರ ಕಲ್ಪನೆ ಬಳಿ‌ ನಡುರಸ್ತೆಯಲ್ಲಿಯೇ ಕಾರೊಂದು ಧಗಧಗನೇ ಹೊತ್ತಿ ಉರಿದ ಘಟನೆ ನಡೆದಿದೆ.

ರವಿವಾರ ಮಧ್ಯಾಹ್ನ 12ಗಂಟೆಗೆ ಈ ಘಟನೆ ನಡೆದಿದೆ. ಸ್ವಿಫ್ಟ್ ಡಿಸಾಯರ್ ಟ್ಯಾಕ್ಸಿಯಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡಿದೆ. ಬಳಿಕ ಕಾರು ಸಂಪೂರ್ಣ ಧಗಧಗನೇ ಹೊತ್ತಿ ಉರಿದಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕಾರಿನಲ್ಲಿ ಬೆಂಕಿಯ ಜ್ವಾಲೆ ಏಳುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ.‌ ಸದ್ಯ ಸ್ಥಳದಲ್ಲಿದ್ದವರೇ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರು ಯಾರಿಗೆ ಸೇರಿದ್ದು, ಯಾಕಾಗಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಯಾವುದೇ ಸಾವು – ನೋವು ಸಂಭವಿಸಿದಂತೆ ಕಂಡು ಬಂದಿಲ್ಲ.

ಜಾಹೀರಾತು
ಜಾಹೀರಾತು