Tuesday, March 10, 2026
ದಕ್ಷಿಣ ಕನ್ನಡಮಂಗಳೂರುಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದುವರಿದ ಮಳೆ :ಹಲವೆಡೆ ಮರಗಳು ಬಿದ್ದು, ಮಣ್ಣು ಕುಸಿದು ಹಾನಿ -ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಸುರಿದ ಮಳೆ ಬುಧವಾರವೂ ಮುಂದುವರೆದಿದೆ. ಹಲವೆಡೆ ಮರಗಳು ಬಿದ್ದು, ಮಣ್ಣು ಕುಸಿದು ಹಾನಿ ಉಂಟಾಗಿದೆ.

ನಗರದಲ್ಲಿ ಮಂಗಳವಾರ ರಾತ್ರಿ ಬಿಟ್ಟು ಬಿಟ್ಟು ಮಳೆಯಾಗಿದೆ. ಬುಧವಾರ ನಸುಕಿನಲ್ಲಿ ಮಳೆ ನಿಂತಿತ್ತು. ಬೆಳಿಗ್ಗೆ 8ರ ಬಳಿಕ ತುಂತುರು ಮಳೆ ಮತ್ತೆ ಶುರುವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉಳ್ಳಾಲ ತಾಲ್ಲೂಕಿನ ಸಜಿಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ಇಸಮ್ಮ ಅವರ ಮನೆಗೆ ಪಕ್ಕದ ಮಸೀದಿಯ ಆವರಣ ಗೋಡೆ ಬಿದ್ದು ಭಾಗಶಃ ಹಾನಿಯಾಗಿದೆ.

ಜಾಹೀರಾತು
ಜಾಹೀರಾತು

ಕೊಣಾಜೆ ಗ್ರಾಮದ ಆದಿಶಕ್ತಿ ದೇವಸ್ಥಾನ ದಡಸ್ ಎಂಬಲ್ಲಿ ತಡೆಗೋಡೆ ಕುಸಿದಿದೆ. ಕಿನ್ಯ ಗ್ರಾಮದ ಮಹಮ್ಮದ್ ಹನೀಫ್ ಅವರ ಮನೆ ಭಾಗಶಃ ಹಾನಿಗೊಳಗಾಗಿದೆ.