Wednesday, March 11, 2026
ಸುದ್ದಿ

ಬೆಳ್ಳಂಬೆಳಗ್ಗೆ ಕಾರ್‌-ಖಾಸಗಿ ಬಸ್‌ ನಡುವೆ ಭೀಕರ ಅಪಘಾತ: ಆರು ಮಂದಿ ದುರ್ಮರಣ-ಕಹಳೆ ನ್ಯೂಸ್

ಹೀಂದ್ರಾ ಸ್ಕಾರ್ಪಿಯೋ ಕಾರ್, ವಿಆರ್ ಎಲ್ ಖಾಸಗಿ ಬಸ್, ಕಂಟೇನರ್ ವಾಹನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, 6 ಜನರು ದಾರುಣ ಸಾವಿಗೀಡಾದ ಘಟನೆ ಜಿಲ್ಲೆಯ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಬೆಳಗ್ಗೆ ನಡೆದಿದೆ.

ಸೊಲ್ಲಾಪುರ ಕಡೆಯಿಂದ ಹೋಗುತ್ತಿದ್ದ ಸ್ಕಾರ್ಪಿಯೋ ಕಾರ್, ಮುಂಬೈನಿಂದ ಬಳ್ಳಾರಿ ಕಡೆಗೆ ಹೋಗುತ್ತಿದ್ದ ವಿಆರ್ ಎಲ್ ಬಸ್, ಕಂಟೇನರ್ ಮಧ್ಯೆ ಭೀಕರ ಡಿಕ್ಕಿಯಾಗಿ, ಸ್ಕಾರ್ಪಿಯೋದಲ್ಲಿರುವ 5 ಜನರು, ವಿಆರ್ ಎಲ್ ಬಸ್ ಚಾಲಕ ಸ್ಥಳದಲ್ಲೇ ಅಸುನೀಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರ ಗುರುತು, ಪತ್ತೆ ಇನ್ನು ತಿಳಿದು ಬಂದಿಲ್ಲ.ಸ್ಥಳಕ್ಕೆ ಮನಗೂಳಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಂಚಾರಕ್ಕೆ ತಡೆಯಾಗಿದ್ದು, ಇಲ್ಲಿನ ಚತುಷ್ಪಥ 50 ರ ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಬದಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಜಾಹೀರಾತು
ಜಾಹೀರಾತು