Tuesday, March 10, 2026
ದಕ್ಷಿಣ ಕನ್ನಡಮಂಗಳೂರುಸಿನಿಮಾಸುದ್ದಿ

ಮಂಗಳೂರಿನ ಭಾರತ್ ಮಹಲ್ ನಲ್ಲಿ ಅದ್ಧೂರಿಯಾಗಿ ತೆರೆಕಂಡ “ಜೇವನ್” ಕೊಂಕಣಿ ಚಲನಚಿತ್ರ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನ ಭಾರತ್ ಮಹಲ್ ನಲ್ಲಿ ಕೊಂಕಣಿ ಚಲನಚಿತ್ರ ಜೇವನ್ ಬಹಳ ಉತ್ಸಾಹ ವಿಜೃಂಭಣೆಯಿಂದ ತೆರೆಕಂಡಿತು. ಸಂದರ್ಭದಲ್ಲಿ ದೀಪ ಬೆಳಗಿಸುವ ಮುಖಾಂತರ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ , ದಾಯಿಜೀ ವಲ್ರ್ಡ್ ನ ಸ್ಥಾಪಕ ಅಧ್ಯಕ್ಷರಾದ ವಾಲ್ಟರ್ ನಂದಳಿಕೆ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾ ರಿಸ್, ಯೂತ್ ಆಫ್ ಜಿ.ಎಸ್.ಬಿ. ಸ್ಥಾಪಕರಾದ ನರೇಶ ಶೆಣೈ , ಉದ್ಯಮಿ ರತ್ನಾ’ಸ್ ವೈನ್ ಗೇಟ್ ನ ಮಾಲಕರಾದ ಡಿ. ರಮೇಶ ನಾಯಕ್ ಹಾಗೂ ಸುಚಿತ್ರಾ ನಾಯಕ್ , ದೇವಗಿರಿ ಟೀ ಕಂಪನಿಯ ನಿರ್ದೇಶಕರಾದ ಉಷಾ ನಂದಗೋಪಾಲ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೇವದಾಸ್ ಪೈ ,ಕೊಂಕಣಿ ನಟರಾದ ದಿನೇಶ್ ಪ್ರಭು, ಸತೀಶ್ ನಾಯಕ್, ಸಬಿತಾ ನಾಯಕ್ ಹಾಗೂ ಸಿನಿಮಾ ನಟರಾದ ಮಂಜು ರೈ ಮುಂತಾದವರು ಪಾಲ್ಗೊಂಡು ದೀಪ ಬೆಳಗಿಸುವ ಮುಖಾಂತರ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕೊಂಕಣಿ ಸಿನಿಮಾಗಳು ಇತ್ತೀಚೆಗೆ ಬಹಳ ವಿರಳ ಅಂತಹ ಸಂದರ್ಭದಲ್ಲಿ ನಿರ್ದೇಶಕರಾದ ಕೊರೋಪಾಡಿ ಅಕ್ಷಯ ನಾಯಕ್ ಅವರ ಪ್ರಯತ್ನ ನಿಜವಾಗಿಯೂ ಅಭಿನಂದನೀಯ ಎಂದು ಹೇಳಿದರು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವಂತಹ ಕೊಂಕಣಿ ಸಂಸ್ಕೃತಿ ಉಳಿಯಬೇಕಾದರೆ ಭಾಷೆ, ಸಾಹಿತ್ಯ ಹಾಗೂ ಕಲೆ ಅಭಿವೃದ್ಧಿ ಪಡಬೇಕು ಇಂತಹ ವಿಚಾರಗಳಲ್ಲಿ ಸಿನಿಮಾ ರಂಗವು ಬಹಳ ಪೂರಕವಾಗಿದೆ ಎಂದು ಅಭಿಪ್ರಾಯ ಪಟ್ಟರು.ಮಾತ್ರವಲ್ಲ ಈ ಚಲನಚಿತ್ರ ಜನರ ಮನಸ್ಸನ್ನು ಸೂರೆಗೊಳ್ಳಲಿ ಹಾಗೂ ಎಲ್ಲರ ಮನೆ ಮಾತಾಗಿ ಯಶಸ್ವಿಯಾಗಲಿ ಎಂದು ಶುಭ ನುಡಿಗಳ ಮುಖಾಂತರ ಶುಭ ಹಾರೈಸಿದರು. ಚಲನಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಂತೋಷ ಪೈ, ಸತೀಶ್ ಪೈ ,ರಾಧೇಶ್ ಶೆಣೈ ಮುಂತಾದವರು ಅಭಿನಯಿಸಿದ್ದರು.

ಜಾಹೀರಾತು
ಜಾಹೀರಾತು

ನಿರ್ದೇಶಕರಾದ ಅಕ್ಷಯನಾಯಕ್ ಅವರು ಸ್ವಾಗತವನ್ನು ನೀಡಿ ವಾಸ್ತವದಲ್ಲಿ ದಿನನಿತ್ಯ ನಮ್ಮ ಜೊತೆಯಲ್ಲೇ ನಡೆಯುತ್ತಿರುವ ಸಂದರ್ಭಗಳನ್ನು ಅಳವಡಿಸಿಕೊಂಡು ಹಾಸ್ಯ ಪ್ರಧಾನವಾಗಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹ ಸುಂದರ ಕಥೆಯನ್ನು ಒಳಗೊಂಡ ಅತ್ಯುತ್ತಮ ಸಿನಿಮಾವನ್ನು ನಿರ್ಮಿಸಿದ್ದೇವೆ ಎಂದು ಹೇಳುತ್ತಾ ಎಲ್ಲರೂ ಮನೆ ಮಂದಿಯಾಗಿ ಕುಟುಂಬ ಸಮೇತರಾಗಿ ಬಂದು ಈ ಚಲನಚಿತ್ರವನ್ನು ವೀಕ್ಷಿಸಿ ಎಲ್ಲರೂ ಸಂತೋಷಪಡಬೇಕು ಎಂದು ವಿನಂತಿಸಿದರು. ಈ ಚಲನಚಿತ್ರವು ಪ್ರತಿ ಶನಿವಾರ ಹಾಗೂ ಆದಿತ್ಯವಾರ ಭಾರತ್ ಸಿನಿಮಾದ ಎಲ್ಲಾ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿರುವುದು ಎಂದು ಹೇಳಿದರು. ನಗೆಗಡಲಲ್ಲಿ ತೇಲಿದ ಪ್ರೇಕ್ಷಕರ ಪ್ರತಿಕ್ರಿಯೆ ಹರ್ಷೋದ್ಗಾರಗಳ ಮೂಲಕ ಅತ್ಯುತ್ತಮವಾಗಿ ಮೂಡಿ ಬಂತು . ಸೂರಜ್ ಭಟ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದ ನೀಡಿದರು