Wednesday, March 11, 2026
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಆರ್‌ಸಿಬಿ vs ಕೆಕೆಆರ್‌ ಪಂದ್ಯಕ್ಕೆ ಭಾರೀ ಮಳೆ ಅಡ್ಡಿ -ಕಹಳೆ ನ್ಯೂಸ್

ಬೆಂಗಳೂರು: 8 ದಿನಗಳ ಕಾಲ ನಿಂತುಹೋಗಿದ್ದ ಟೂರ್ನಿ ಮರಳಿ ಗರಿಗೆದರಬೇಕಿದ್ದ ಶನಿವಾರ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ಪಂದ್ಯಕ್ಕೆ ಭಾರೀ ಮಳೆ ಅಡ್ಡಿ ಮಾಡಿದೆ. ಟಾಸ್ ಕೂಡ ಸಾಧ್ಯವಾಗದೆ ಪಂದ್ಯ ವಿಳಂಬವಾಗಿದೆ.

ಭಾರತ- ಪಾಕಿಸ್ಥಾನ ನಡುವಿನ ಯುದ್ಧ ಸನ್ನಿವೇಶ ದಿಂದ ಸ್ಥಗಿತಗೊಂಡಿದ್ದ ಐಪಿಎಲ್‌ ಪಂದ್ಯಾವಳಿ ಇಂದಿನ ಮುಖಾಮುಖಿಯೊಂದಿಗೆ ಪುನರಾರಂಭವಾಗಬೇಕಿತ್ತು. ರಾತ್ರಿ 7.35 ರ ವೇಳೆಗೂ ಜೋರಾಗಿ ಮಳೆ ಸುರಿಯುತ್ತಿದೆ.ಓವರ್‌ಗಳನ್ನು ಕಡಿತ ಮಾಡಿ ಪಂದ್ಯ ಪ್ರಾರಂಭಿಸಲು 8.45 ರ ವರೆಗೆ ಸಮಯವಿದೆ, ರಾತ್ರಿ 10.56 ರ ವರೆಗೂ ಐದು ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

11ರಲ್ಲಿ 8 ಪಂದ್ಯ ಗೆದ್ದಿರುವ ಆರ್‌ಸಿಬಿ 16 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದೆ. ಕೋಲ್ಕತಾ ನೈಟ್‌ರೈಡರ್ ತಂಡವನ್ನು ಸೋಲಿಸಿದರೆ ಪ್ಲೇ ಆಫ್ ತಲುಪಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಜಾಹೀರಾತು
ಜಾಹೀರಾತು

ಟೆಸ್ಟ್‌ ಕ್ರಿಕೆಟಿಗೆ ವಿದಾಯ ಘೋಷಿಸಿದ ವಿರಾಟ್‌ ಕೊಹ್ಲಿ ಆಟ ವೀಕ್ಷಿಸಲು ಆರ್‌ಸಿಬಿ ಅಭಿಮಾನಿಗಳೆಲ್ಲ ಕೊಹ್ಲಿ ಅವರ 18ನೇ ಕ್ರಮಾಂಕದ ಬಿಳಿ ಟೆಸ್ಟ್‌ ಜೆರ್ಸಿ ಧರಿಸಿ ಆಗಮಿಸಿದ್ದಾರೆ.