Wednesday, March 11, 2026
ಜಿಲ್ಲೆರಾಜ್ಯಸುದ್ದಿ

ಉದ್ಯಾನವನದಲ್ಲಿ ಹುಲಿ ಮರಿಯನ್ನು ಮುಟ್ಟಿ ಆಟವಾಡಿದ ವ್ಯಕ್ತಿಯ ವಿರುದ್ಧ FIR – ಕಹಳೆ ನ್ಯೂಸ್

ಜೈಪುರ: ರಾಜಸ್ಥಾನದಲ್ಲಿ ಹುಲಿ ಮರಿಯನ್ನು ಮುಟ್ಟಿ ಅದರೊಂದಿಗೆ ಆಟವಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ರಾಜಸ್ಥಾನದ ಸವಾಯಿ ಮಾಧೋಪುರ ಬಳಿಯ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬ ಹುಲಿ ಮರಿಗಳನ್ನು ಮುಟ್ಟಿದ್ದು ಅಲ್ಲದೆ ಅವುಗಳ ಜೊತೆ ಆಟವಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ, ಹುಲಿ ಮರಿಗಳನ್ನು ಮುಟ್ಟಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ದೇಶದ ವನ್ಯಜೀವಿಗಳು, ಪಕ್ಷಿಗಳು ಮತ್ತು ಸಸ್ಯ ಪ್ರಭೇದಗಳಿಗೆ ರಕ್ಷಣೆ ನೀಡುವ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು

“ಈ ವ್ಯಕ್ತಿ ಹುಲಿ ಮರಿಗಳ ಬಳಿ ಹೇಗೆ ಹೋದ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದರು. ಸದ್ಯ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.