ಮುಂದಿನ ವಿಚಾರಣೆವರೆಗೆ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು – ಹೈಕೋರ್ಟ್ -ಕಹಳೆ ನ್ಯೂಸ್

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಭಾವನೆಗೆ ಧಕ್ಕೆಯಾಗುವಂತೆ ಮಾತನಾಡಿದ್ದ ಖ್ಯಾತ ಗಾಯಕ ಸೋನು ನಿಗಮ್ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಗುರುವಾರ (ಮೇ.15) ನಡೆದಿದೆ.
ಹೈಕೋರ್ಟ್ ನ್ಯಾ. ಶಿವಶಂಕರ್ ಅಮರಣ್ಣನವರ್ ಅವರ ಪೀಠದಲ್ಲಿ ವಿಚಾರಣೆ ನಡೆದಿದೆ. ಸೋನು ನಿಗಮ್ ಅವರು ತನಿಖೆಗೆ ಸಹಕರಿಸಿದರೆ ಅವರ ವಿರುದ್ಧ ಬಲವಂತದ ಕ್ರಮವನ್ನು ಕೈಗೊಳ್ಳುವುದಿಲ್ಲ. ಅವರು ತನಿಖೆಗೆ ಸಹಕರಿಸಿಲ್ಲವೆಂದು ಎಂದು ಪೊಲೀಸರ ಪರ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರು ವಾದಿಸಿದ್ದಾರೆ.
11 ವರ್ಷದ ಬಳಿಕ ಆಮಿರ್ – ಹಿರಾನಿ ಸಾಥ್; ‘ದಾದಾ ಸಾಹೇಬ್ ಫಾಲ್ಕೆʼಬಯೋಪಿಕ್ ಗೆ ಆಯಕ್ಷನ್ ಕಟ್
ಸೋನು ನಿಗಮ್ ಬೆಂಗಳೂರಿಗೆ ಬಂದು ತನಿಖೆ ಎದುರಿಸಿದರೆ ಸಮಸ್ಯೆ ಆಗಬಹುದು. ಖುದ್ದು ತನಿಖೆಯ ಹಾಜರಿಯಿಂದ ಅವರಿಗೆ ವಿನಾಯಿತಿ ನೀಡಬೇಕು ಎಂದು ಸೋನು ಪರ ವಕೀಲರು ಮನವಿ ಮಾಡಿದ್ದಾರೆ.
ಅರ್ಜಿದಾರರ ವಾದ – ಪ್ರತಿವಾದವನ್ನು ಆಲಿಸಿದ ಕೋರ್ಟ್ ಸೋನು ನಿಗಮ್ ಅವರ ವೆಚ್ಚದಲ್ಲೇ, ಅವರಿದ್ದ ಜಾಗದಲ್ಲೇ ತನಿಖೆ ನಡೆಸಬೇಕು ಅಥವಾ ವಿಡಿಯೋ ಕಾನ್ಫೆರನ್ಸ್ ಮೂಲಕ ತನಿಖೆ ನಡೆಸಬೇಕು. ಮುಂದಿನ ವಿಚಾರಣೆವರೆಗೂ ಸೋನು ನಿಗಮ್ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದೆಂದು ಆದೇಶಿಸಿದೆ.
ಕೋರ್ಟ್ ಅನುಮತಿ ಇಲ್ಲದೆ ದೋಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ಈ ವೇಳೆ ಪೀಠ ಹೇಳಿದೆ.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸೋನು ಅವರಿಗೆ ನೊಟೀಸ್ ಕಳುಹಿಸಿದ್ದರು. ಈ ನೊಟೀಸ್‌ಗೆ ಉತ್ತರ ನೀಡಲು ಏಳು ದಿನ ಗಡುವು ನೀಡಿದ್ದರು. ಆದರೆ ಸೋನು ನಿಗಮ್ ಪೊಲೀಸರ ನೊಟೀಸ್‌ಗೆ ಉತ್ತರ ನೀಡಿರಲಿಲ್ಲ.














