Wednesday, March 11, 2026
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಮುಖ್ಯ-ಗವರ್ನರ್ ಗೆಹ್ಲೋಟ್‌;‌ಅದ್ದೂರಿ ರಜತ ಸಂಭ್ರಮ -ಕಹಳೆ ನ್ಯೂಸ್

ಮಂಗಳೂರು: ನಿರಂತರವಾಗಿ 25 ವರ್ಷಗಳ ಕಾಲ ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಪ್ರವರ್ತಿತ ನವೋದಯ ಸ್ವಸಹಾಯ ಗುಂಪುಗಳನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಸ್ತ್ರೀಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಈ ಕಾಯಕದ ರೂವಾರಿಯಾದ ಎಂಎನ್‌ ರಾಜೇಂದ್ರ ಕುಮಾರ್‌ ಅವರನ್ನು ಅಭಿನಂದಿಸುತ್ತೇನೆ.

ದೇಶದಲ್ಲಿನ ಈ ಯುದ್ಧ ಸನ್ನಿವೇಶದಲ್ಲಿ ನಾವೆಲ್ಲ ಹೇಗೆ ಒಗ್ಗಟ್ಟಾಗಿದ್ದೇವೆಯೋ ಅದೇ ರೀತಿ ಸಹಕಾರಿ ಕ್ಷೇತ್ರದಲ್ಲೂ ಒಗ್ಗಟ್ಟು ಮುಖ್ಯ ಎಂದು ರಾಜ್ಯಪಾಲ ಡಾ.ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯುದ್ಧ ಸಂಘರ್ಷದ ಈ ಸಂದರ್ಭದಲ್ಲಿ ಸೈನಿಕರ ಕಲ್ಯಾಣ ನಿಧಿಗೆ 3 ಕೋಟಿ ರೂಪಾಯಿ ದೇಣಿಗೆ ನೀಡಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್‌ ಅವರನ್ನು ಶ್ಲಾಘಿಸುವುದಾಗಿ ರಾಜ್ಯಪಾಲ ಗೆಹ್ಲೋಟ್‌ ತಿಳಿಸಿದರು.

ಜಾಹೀರಾತು
ಜಾಹೀರಾತು

ಅವರು ಶನಿವಾರ (ಮೇ 10) ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾದ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಸಂಸ್ಥಾಪಕರಾಗಿರುವ ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಪ್ರವರ್ತಿತ ನವೋದಯ ಸ್ವ ಸಹಾಯ ಗುಂಪುಗಳ ರಜತ ಸಂಭ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಂಗಳೂರಿನ ಬಂಗ್ರ ಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ನಡೆದ ಬೃಹತ್‌ ಕಾರ್ಯಕ್ರಮದಲ್ಲಿ 8 ಜಿಲ್ಲೆಗಳ ಒಂದೂವರೆ ಲಕ್ಷಕ್ಕೂ ಅಧಿಕ ಮಹಿಳೆಯರು ನೀಲಿ ಬಣ್ಣದ ಸಮವಸ್ತ್ರದಲ್ಲಿ ಭಾಗವಹಿಸಿದ್ದರು.

ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌, ಡಿಸಿಎಂ ಡಿಕೆ ಶಿವಕುಮಾರ್‌ ಮತ್ತು ಸ್ಪೀಕರ್‌ ಯುಟಿ ಖಾದರ್‌ ಸಹಕಾರಿ ಧ್ವಜವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ರಜಸಂಭ್ರಮ ಉದ್ಘಾಟಿಸಿದರು.

ದಕ್ಷಿಣ ಕನ್ನಡದ ಶಾಂತಿ-ನೆಮ್ಮದಿ ಕಾಪಾಡಿಕೊಳ್ಳಬೇಕು: ಡಿಕೆ

ರಜತ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಡಿಕೆಶಿ ಅವರು, ಲಕ್ಷಾಂತರ ಮಂದಿ ಸ್ತ್ರೀಯರ ಬದುಕನ್ನು ಬೆಳಗುವ ಜ್ಯೋತಿ ಇಲ್ಲಿ ಬೆಳಗಿಸಲಾಗಿದೆ. ನಿಮ್ಮ ಕುಟುಂಬ ಬೆಳೆಯಬೇಕು, ಹೆಣ್ಣುಮಕ್ಕಳಿಗೆ ಆರ್ಥಿಕ ಶಕ್ತಿ ಕೊಡಬೇಕು ಎಂಬ ನಿಟ್ಟಿನಲ್ಲಿ ಸ್ವಸಹಾಯ ಸಂಘ ಜನ್ಮತಳೆದಿದೆ. ಧರ್ಮ, ಶಾಂತಿ-ನೆಮ್ಮದಿಗೆ ಹೆಸರಾದ ಈ ಪವಿತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಧರ್ಮ-ಸಂಸ್ಕೃತಿಯನ್ನು ಕಾಪಾಡಿಕೊಂಡು, ಇಲ್ಲಿನ ಇತಿಹಾಸ ಪರಂಪರೆಯನ್ನು ಕಾಪಾಡಿಕೊಂಡು ಹೋಗಬೇಕಾದ ಹೊಣೆಗಾರಿಕೆ ಮಹಿಳೆಯರದ್ದಾಗಿದೆ ಎಂದು ಹೇಳಿದರು.

ಸಮಾಜವನ್ನು ಕಟ್ಟುವ, ಮಾತೆಯರನ್ನು ಬೆಳೆಸುವ ಕೆಲಸ: ಪೇಜಾವರಶ್ರೀ

ದಕ್ಷಿಣ ಕನ್ನಡ, ಉಡುಪಿ ಸಹಕಾರ ಕ್ಷೇತ್ರದ ವೈಭವ ಹೊಂದಿದ್ದು,ಇದರ ಇತಿಹಾಸವನ್ನು ಮುಂದುವರಿಸಿದೆ ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿದೆ. ಎಂಎನ್‌ ರಾಜೇಂದ್ರ ಕುಮಾರ್‌ ಅವರು ಸಮಾಜವನ್ನು ಕಟ್ಟುವ, ಮಾತೆಯರನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಸಮಾಜಕ್ಕೆ ದೊಡ್ಡ ಮಾರ್ಗದರ್ಶನ ನೀಡಿದ್ದಾರೆ ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು.

ಸ್ತ್ರೀಯರು ಈ ಸಂಘವನ್ನು ರಕ್ಷಣೆ ಮಾಡಿಕೊಂಡು ಮುನ್ನಡೆಯಬೇಕು: ಡಾ.ಹೆಗ್ಗಡೆ

ದೀಪವನ್ನು ಹೇಗೆ ಕೈಹಿಡಿದು ರಕ್ಷಿಸುತ್ತೇವೆಯೋ ಎಂಎನ್‌ ರಾಜೇಂದ್ರ ಕುಮಾರ್‌ ಅವರು ಕೂಡಾ 25 ವರ್ಷಗಳಿಂದ ಈ ಸಹಕಾರ ಸಂಘವನ್ನು ಕೈಹಿಡಿದು ಬೆಳೆಸಿದ್ದಾರೆ. ನವೋದಯ ಗ್ರಾಮ ವಿಕಾಸ ಟ್ರಸ್ಟ್‌ ಮೂಲಕ ಸ್ತ್ರೀಯರಿಗೆ ಆರ್ಥಿಕ ಸಹಕಾರ ನೀಡಿದ್ದಾರೆ. ಸ್ತ್ರೀಯರು ಈ ಸಂಘವನ್ನು ರಕ್ಷಣೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಚನದಲ್ಲಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಮುರುಗೇಶ್‌ ನಿರಾಣಿ, ಇಫ್ಕೋ ಸಂಸ್ಥೆಯ ಉದಯ ಶಂಕರ್‌ ಅವಸ್ತಿ, ಶಾಸಕರಾದ ಸುನಿಲ್‌ ಕುಮಾರ್‌, ಅಶೋಕ್‌ ಕುಮಾರ್‌ ರೈ, ಡಾ.ಭರತ್‌ ಶೆಟ್ಟಿ, ಉಮನಾಥ್‌ ಕೋಟ್ಯಾನ್‌, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕೊಡ್ಗಿ, ಯಶ್‌ ಪಾಲ್‌ ಸುವರ್ಣ, ಎಂಎಲ್‌ ಸಿಗಳಾದ ಐವನ್‌ ಡಿಸೋಜಾ, ಎಸ್.ಎಲ್.ಭೋಜೇಗೌಡ, ಬಂಟರ ಸಂಘದ ಐಕಳ ಹರೀಶ್‌ ಶೆಟ್ಟಿ, ಮಾಜಿ ಸಚಿವರಾದ ವಿನಯ್‌ ಕುಮಾರ್‌ ಸೊರಕೆ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್‌, ಯುವ ಮುಖಂಡರಾದ ಮಿಥುನ್‌ ರೈ, ಇನಾಯತ್‌ ಅಲಿ, ಸಂಜೀವ ಮಠಂದೂರು, ಆರ್.ಪದ್ಮರಾಜ್‌, ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಪ್ರಸಾದ್‌ ರಾಜ್‌ ಕಾಂಚನ್‌, ದಿನೇಶ್‌ ಹೆಗ್ಡೆ ಮೊಳಹಳ್ಳಿ, ರಕ್ಷಿತ್‌ ಶಿವರಾಂ, ಕಿಶೋರ್‌ ಆಳ್ವ, ಡಾ.ಮೋಹನ್‌ ಆಳ್ವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಅಪೆಕ್ಸ್‌ ಬ್ಯಾಂಕ್‌ ಮ್ಯಾನೇಜರ್‌ ದೇವರಾಜ್‌, ಡಾ.ಪಿ.ಎಲ್.ಧರ್ಮ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.