ಭಾರತದ ತಿರುಗೇಟಿಗೆ ಬೆದರಿದ ಪಾಕ್ ; ದಾಳಿ ನಿಲ್ಲಿಸಿದ್ರೆ..ನಾವು ತಟಸ್ಥರಾಗ್ತೇವೆ – ಕಹಳೆ ನ್ಯೂಸ್

ನವದೆಹಲಿ: ಪಹಲ್ಗಾಮ್ ಭಯೋ*ತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ದಾಳಿ ನಡೆಸಿ ಉ*ಗ್ರರನ್ನು ಹಾಗೂ ಉ*ಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸುವ ಮೂಲಕ ತಕ್ಕ ಪಾಠ ಕಲಿಸಿದ ಬೆನ್ನಲ್ಲೇ ಇದೀಗ ಒಂದು ವೇಳೆ ಭಾರತ ಸೇನಾ ದಾಳಿಯನ್ನು ನಿಲ್ಲಿಸಿದರೆ, ಪಾಕ್ ಕೂಡಾ ಸಂಘರ್ಷ ನಿಲ್ಲಿಸಲು ಪರಿಗಣಿಸಲಿದೆ ಎಂದು ಶನಿವಾರ (ಮೇ 10) ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿರುವುದಾಗಿ ವರದಿಯಾಗಿದೆ.
ಸಿಎನ್ ಎನ್-ನ್ಯೂಸ್ 18ಗೆ ಸರ್ಕಾರದ ಉನ್ನತ ಮೂಲಗಳು ತಿಳಿಸಿರುವ ಪ್ರಕಾರ, ಸಂಘರ್ಷದಿಂದಾಗಿ ಪಾಕಿಸ್ತಾನದಲ್ಲಿನ ಕೆಟ್ಟ ಪರಿಸ್ಥಿತಿಯಿಂದಾಗಿ ಉದ್ವಿಗ್ನತೆ ಕಡಿಮೆ ಮಾಡಲು ಪಾಕ್ ಬಯಸಿದ್ದು, ಈ ನಿಟ್ಟಿನಲ್ಲಿ ಪಾಕ್ ಮೊದಲ ಬಾರಿಗೆ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳ ಜತೆ ದೂರವಾಣಿ ಕರೆಯಲ್ಲಿ ಚರ್ಚಿಸಿರುವುದಾಗಿ ವರದಿ ವಿವರಿಸಿದೆ.
ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರತದ ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಮಿಸೈಲ್ಸ್, ಡ್ರೋನ್ಸ್ ದಾಳಿ ನಡೆಸಲು ಯತ್ನಿಸಿದ್ದು, ಇದನ್ನು ಭಾರತದ ಏರ್ ಡಿಫೆನ್ಸ್ ಹೊಡೆದುರುಳಿಸಿದ್ದವು.
ಪಾಕಿಸ್ತಾನದ ಉದ್ಧಟತನಕ್ಕೆ ಪ್ರತೀಯಾಗಿ ಭಾರತ, ಪಾಕಿಸ್ತಾನದ ರಾಫಿಖಿ, ಮುರಿಡ್, ಚಾಕ್ಲಾಲಾ ಮ್ತು ರಹೀಂ ಯಾರ್ ಖಾನ್ ವಾಯುಪಡೆ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿ, ಏರ್ ಡಿಫೆನ್ಸ್ ಅನ್ನು ಧ್ವಂಸಗೊಳಿಸಿತ್ತು.
ಭಾರತದ ಖಡಕ್ ದಾಳಿಗೆ ಬೆದರಿದ ಪಾಕ್ ಸಚಿವರು ಈ ರೀತಿ ಯೂ ಟರ್ನ್ ಹೊಡೆದಿರುವುದು ಇದೇ ಮೊದಲಲ್ಲ… ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಅಸಿಫ್ ಕೂಡಾ ಈ ಮೊದಲು ಒಂದು ನಾವಿರಬೇಕು(ಪಾಕ್) ಇಲ್ಲವೇ ಯಾರೂ ಇರಬಾರದು ಎಂದು ಹೇಳಿಕೆ ನೀಡಿದ್ದು, ಬಳಿಕ ಒಂದು ವೇಳೆ ಭಾರತ ದಾಳಿ ನಿಲ್ಲಿಸಿದರೆ ನಾವು ಕೂಡಾ ಸಂಘರ್ಷ ನಿಲ್ಲಿಸುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.














