Sunday, March 8, 2026
ರಾಜ್ಯರಾಷ್ಟ್ರೀಯಸುದ್ದಿ

ಭಾರತ ಮತ್ತು ಪಾಕ್​ ಶಾಂತಿ, ಸ್ಥಿರತೆಗೆ ಆದ್ಯತೆ ನೀಡಬೇಕು; ಉದ್ವಿಗ್ನತೆ ಹೆಚ್ಚಿಸಿಕೊಳ್ಳದಂತೆ ಚೀನಾ ಒತ್ತಾಯ – ಕಹಳೆ ನ್ಯೂಸ್

‘ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಶಾಂತಿ, ಸ್ಥಿರತೆಗೆ ಆದ್ಯತೆ ನೀಡಬೇಕು. ಜೊತೆಗೆ ಶಾಂತ ಮತ್ತು ಸಂಯಮದಿಂದಿರಬೇಕು ಎಂದು’ ಚೀನಾ ಹೇಳಿದೆ.

ಪರಮಾಣು ಶಸ್ತ್ರಸಜ್ಜಿತ ನೆರೆಯ ರಾಷ್ಟ್ರಗಳ ನಡುವಿನ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧದತ್ತ ಸಾಗುತ್ತಿರುವುದರಿಂದ, ಭಾರತ ಮತ್ತು ಪಾಕಿಸ್ತಾನಗಳು ಸಂಘರ್ಷದಲ್ಲಿ ಉಲ್ಬಣಗೊಳ್ಳುವುದನ್ನು ತಪ್ಪಿಸುವಂತೆ ಚೀನಾ ಶನಿವಾರ (ಮೇ.10) ಒತ್ತಾಯಿಸಿದೆ ಎಂದು ಬೀಜಿಂಗ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

‘ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಶಾಂತಿ ಮತ್ತು ಸ್ಥಿರತೆಗೆ ಆದ್ಯತೆ ನೀಡಬೇಕು, ಶಾಂತ ಮತ್ತು ಸಂಯಮದಿಂದಿರಬೇಕು, ಶಾಂತಿಯುತ ಮಾರ್ಗಗಳ ಮೂಲಕ ರಾಜಕೀಯ ಇತ್ಯರ್ಥದ ಹಾದಿಗೆ ಮರಳಬೇಕು ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು

ಭಾರತದ ಮೇಲೆ ಪಾಕಿಸ್ತಾನದ ದಾಳಿಗಳು ಮುಂದುವರೆದಿವೆ. ಜಮ್ಮುವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡೋನ್ ದಾಳಿ ನಡೆಸಿತು. ಜಮ್ಮು ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ. ನಡೆಸಲಾಯಿತು. ಜಮ್ಮುವಿನ ಒಟ್ಟು ಏಳು ಸ್ಥಳಗಳಲ್ಲಿ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಅಮೃತಸರಗಳಲ್ಲಿ ವಿದ್ಯುತ್ ವ್ಯತ್ಯಯ ಹೇರಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಅನ್ನೂರ್‌ನಲ್ಲಿ ಸೈರನ್‌ಗಳು ಮೊಳಗಿದವು. ಭಾರತ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು.

ಪಾಕಿಸ್ತಾನ ಎರಡು ಜೆಎಫ್ -17 ಯುದ್ಧ ವಿಮಾನಗಳನ್ನು ಮತ್ತು ಒಂದು ಎಫ್ -16 ವಿಮಾನವನ್ನು ಹೊಡೆದುರುಳಿಸಿತು. ಅದು 5400 ಮೂಲಕ 10 ಪಾಕಿಸ್ತಾನಿ ಡೋನ್‌ಗಳನ್ನು ಹೊಡೆದುರುಳಿಸಿತು. ಪಾಕಿಸ್ತಾನವು ಪಠಾಣ್‌ ಕೋಟ್ ವಾಯುನೆಲೆಯನ್ನೂ ಗುರಿಯಾಗಿಸಿಕೊಂಡಿತು. ಪಾಕಿಸ್ತಾನವು ಕ್ಷಿಪಣಿ ವಿರೋಧಿ ವ್ಯವಸ್ಥೆಗಳಿಂದ ಪತ್ತೆಹಚ್ಚಲು ಸಾಧ್ಯವಾಗದ ಡೋನ್‌ಗಳನ್ನು ಉಡಾಯಿಸುತ್ತಿದೆ.