Monday, March 9, 2026
ದೆಹಲಿರಾಷ್ಟ್ರೀಯಸುದ್ದಿ

ಕಾಶ್ಮೀರದಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ 7 ಉಗ್ರರನ್ನು ಹತ್ಯೆಗೈದ ‘BSF’ -ಕಹಳೆ ನ್ಯೂಸ್

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ನಡೆಯುತ್ತಿರುವ ಸಂದರ್ಭದಲ್ಲಿ ಇದರ ಲಾಭವನ್ನು ಪಡೆದ ಭಯೋತ್ಪಾದಕರು ಜಮ್ಮು ಕಾಶ್ಮೀರದ ಸಾಂಬಾದಲ್ಲಿ ಭಾರತದ ಗಡಿ ಪ್ರವೇಶಕ್ಕೆ ಯತ್ನಿಸಿದ್ದಾರೆ. ಈ ವೇಳೆ ಗಡಿ ಭದ್ರತಾ ಪಡೆಗಳು ಭಾರತ ಪ್ರವೇಶಿಸಲು ಯತ್ನಿಸಿದ 7 ಉಗ್ರರನ್ನು ಹತ್ಯೆಗೈದಿದ್ದಾರೆ.

ಇದೀಗ ಈ ಒಂದು ವಿಡಿಯೋ ಭಾರತೀಯ ಸೇನೆ ರಿಲೀಸ್ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಮ್ಮು ಗಡಿನಾಡಿನ ಬಿಎಸ್‌ಎಫ್‌ನ ಸಾಂಬಾ ಸೆಕ್ಟರ್‌ನಲ್ಲಿ, ಮೇ 8 ಮತ್ತು 9, 2025 ರ ಮಧ್ಯರಾತ್ರಿ, ಭಯೋತ್ಪಾದಕರ ದೊಡ್ಡ ಗುಂಪಿನಿಂದ ಒಳನುಸುಳುವಿಕೆ ಪ್ರಯತ್ನವನ್ನು ನಡೆಸಲಾಗಿದ್ದು, ಇದನ್ನು ಕಣ್ಗಾವಲು ಗ್ರಿಡ್ ಪತ್ತೆ ಮಾಡಿದೆ. ಈ ಒಳನುಸುಳುವಿಕೆ ಪ್ರಯತ್ನಕ್ಕೆ ಪಾಕ್ ರೇಂಜರ್ಸ್ ಪೋಸ್ಟ್ ಧಂಧರ್‌ನಿಂದ ಗುಂಡಿನ ದಾಳಿ ನಡೆಸಿತು.

ಜಾಹೀರಾತು
ಜಾಹೀರಾತು

ಉಗ್ರರು ಭಾರತಕ್ಕೆ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿರುವುದು ಬಿಎಸ್‌ಎಫ್‌ ಯೋಧರಿಗೆ ತಿಳಿದುಬಂದಿದೆ. ತಕ್ಷಣ BSF ಯೋಧರು ಒಳನುಸುಳುವಿಕೆ ಪ್ರಯತ್ನವನ್ನು ತಡೆದಿದ್ದಾರೆ. ಈ ವೇಳೆ BSF ಯೋಧರು ಕನಿಷ್ಠ 7 ಭಯೋತ್ಪಾದಕರನ್ನು ಕೊಂದು ಹತ್ಯೆಗೈದಿದ್ದಾರೆ. ಅಲ್ಲದೇ ಪಾಕ್ ಪೋಸ್ಟ್ ಧಂಧರ್‌ಗೆ ವ್ಯಾಪಕ ಹಾನಿಯನ್ನುಂಟುಮಾಡಿದವು.