ಆಪರೇಷನ್ ಸಿಂಧೂರ್ ನಿಂದ ನಾವು ಏನು ಸಾಧಿಸಲಿದ್ದೇವೆ – ಪಾಕಿಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಕಾಶ್ಮೀರದ ಮಾಜಿ ಸಿಎಂ-ಕಹಳೆ ನ್ಯೂಸ್

ಜಮ್ಮುಕಾಶ್ಮೀರ : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ ಹಮ್ಮಿಕೊಂಡಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಪರಿಣಾಮಗಳ ಬಗ್ಗೆ ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಮಹಬೂಬಾ ಮಫ್ತಿ ಖೇದ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಗಡಿಯಲ್ಲಿರುವ ಮಕ್ಕಳು ಹಾಗೂ ಹೆಂಗಸರು ಈ ಯುದ್ಧದಿಂದ ನಲುಗಿ ಹೋಗಿದ್ದಾರೆ.
ಅವರೂ ಗುಂಡು ಹಾರಿಸುತ್ತಾರೆ. ನಾವೂ ಹಾರಿಸುತ್ತೇವೆ. ಇದರಿಂದ ಏನು ಪ್ರಯೋಜನ ಎಂದು ಮಹಬೂಬಾ ಅವಲತ್ತುಕೊಂಡಿದ್ದಾರೆ.
ಭಯೋತ್ಪಾದಕರು ಸೃಷ್ಟಿಯಾಗುವುದನ್ನು ತಡೆಯಲು ಮಿಲಿಟರಿ ಕಾರ್ಯಾಚರಣೆಯಿಂದ ತಡೆಯಲು ಸಾಧ್ಯವಿಲ್ಲ. ಇದರಿಂದ ಶಾಂತಿ ನೆಲೆಸಲು ಎಂದಿಗೂ ಸಾಧ್ಯವಿಲ್ಲ. ಎರಡೂ ದೇಶಗಳು ಒಂದು ನಿರ್ದಾರಕ್ಕೆ ಬಂದು ಆ ನಿರ್ಣಯಕ್ಕೆ ಬದ್ದರಾಗಿರಬೇಕು. ಪುಲ್ವಾಮಾ ದಾಳಿಯಾದ ಬಳಿಕ ಬಾಲಾಕೋಟ್ ಏರ್ ಸ್ಟ್ರೈಕ್ ದಾಳಿ ನಡೆಸಿ ನಾವು ಸಾಧಿಸಿದ್ದಾದರೂ ಏನು ಎಂದು ಮಫ್ತಿ ಹೇಳಿದ್ದಾರೆ.
ಜಮ್ಮುಕಾಶ್ಮೀರದ ಗಡಿಯಲ್ಲಿರುವ ಜನ ಇನ್ನೂ ಎಷ್ಟು ದಿನ ಈ ಪರಿಸ್ಥಿತಿಯಿಂದ ತೊಂದರೆ ಅನುಭವಿಸಬೇಕು. ನಾವು ಆಪರೇಷನ್ ಸಿಂಧೂರ್ ಮಾಡಿದೆವು. ಪೂಂಛ್ ನಲ್ಲಿರುವ ಹೆಡ್ ಕ್ವಾಟರ್ಸ್ ಗಳನ್ನು ಉರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಅಲ್ಲಿಗೆ ಲೆಕ್ಕ ಸರಿಯಾಗಿದೆ. ಇದಕ್ಕೆ ಒಂದು ಅಂತ್ಯ ಹಾಡಬೇಕೆಂದು ನಾನು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಮಫ್ತಿ ಹೇಳಿದ್ದಾರೆ.














