Tuesday, March 10, 2026
ಅಂತಾರಾಷ್ಟ್ರೀಯಸುದ್ದಿ

“ಭಾರತ ದಾಳಿ ನಡೆಸಿದ್ರೆ ಪರಮಾಣು ಶಸ್ತ್ರಾಸ್ತ್ರ ಬಳಕೆ” : ಪಾಕ್‌ ಎಚ್ಚರಿಕೆ..!-ಕಹಳೆ ನ್ಯೂಸ್

ಇಸ್ಲಾಮಾಬಾದ್:‌ ಭಾರತ ನಮ್ಮ ಮೇಲೆ ಸೇನಾ ದಾಳಿ ಮಾಡಿದರೆ ಅಥವಾ ಒಂದು ವೇಳೆ ಪಾಕಿಸ್ತಾನದ ನೀರು ಸರಬರಾಜಿಗೆ ಅಡ್ಡಿಪಡಿಸಿದರೆ ಪರಮಾಣು ಶಸ್ತ್ರಾಸ್ತ್ರ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಷ್ಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ.

ಶನಿವಾರ (ಮೇ 03) ರಷ್ಯಾದ ಸುದ್ದಿಸಂಸ್ಥೆ ಆರ್‌ ಟಿ ನಡೆಸಿದ ಸಂದರ್ಶನದಲ್ಲಿ ಮಾಸ್ಕೋದಲ್ಲಿರುವ ಪಾಕಿಸ್ತಾನದ ಉನ್ನತ ರಾಯಭಾರಿ ಮುಹಮ್ಮದ್‌ ಖಾಲೀದ್‌ ಜಮಾಲಿ, ಭಾರತ ಪಾಕ್‌ ಮೇಲೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ನಮಗೆ ಖಚಿತ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನದ ಕೆಲವು ಆಯ್ದ ಪ್ರದೇಶಗಳ ಮೇಲೆ ಭಾರತ ದಾಳಿ ನಡೆಸಲು ನಿರ್ಧರಿಸಿದೆ ಎಂಬ ಕೆಲವು ಸೋರಿಕೆಯಾದ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ಭಾರತ ದಾಳಿ ನಡೆಸಲಿದೆ ಎಂಬುದು ಬಹುತೇಕ ಖಚಿತ ಎಂದು ಜಮಾಲಿ ಸಂದರ್ಶನದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.

ಜಾಹೀರಾತು
ಜಾಹೀರಾತು

ಇತ್ತೀಚೆಗಿನ ವರ್ಷಗಳಲ್ಲಿ ಪ್ರತೀಕಾರಕ್ಕೆ ಪರಮಾಣು ಬಳಕೆ ಮಾಡುತ್ತೇವೆ ಎಂಬ ಪಾಕ್‌ ಹಿರಿಯ ಅಧಿಕಾರಿಗಳ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಜಮಾಲಿ, ಯುದ್ಧ ನಡೆದಲ್ಲಿ ನಾವು ಕೂಡಾ ಪೂರ್ಣ ಪ್ರಮಾಣದಲ್ಲಿ ಪರಮಾಣು ಸೇರಿದಂತೆ ಸೇನಾ ಬಲವನ್ನು ಪ್ರಯೋಗಿಸುವುದಾಗಿ ತಿಳಿಸಿದ್ದಾರೆ.

ಮತ್ತೊಂದೆಡೆ ಭಾರತದ ಸಂಭಾವ್ಯ ಸೇನಾ ಕಾರ್ಯಾಚರಣೆಯ ಭೀತಿಯಲ್ಲಿರುವ ಪಾಕಿಸ್ತಾನವು ಶನಿವಾರ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷೆ ನಡೆಸಿದೆ. ಭಾರತ ಕೂಡಾ ನೀರು, ವೀಸಾ, ಗಡಿ ನಿರ್ಬಂಧದ ಬಳಿಕ ಪಾಕ್‌ ನಿಂದ ಆಮದಾಗುವ ಎಲ್ಲಾ ಸರಕುಗಳಿಗೂ ನಿಷೇಧ ಹೇರಿದ್ದು, ಅಂಚೆ, ನೌಕೆಗಳ ಪ್ರವೇಶಕ್ಕೂ ತಡೆ ನೀಡಿದೆ.