ಬೆಂಗಳೂರು: ನೈಸ್ ರಸ್ತೆಯಲ್ಲಿ ವಕೀಲ ಜಗದೀಶ್ ಎಂಬವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..!- ಕಹಳೆ ನ್ಯೂಸ್

ಬೆಂಗಳೂರು: ನೈಸ್ ರಸ್ತೆಯಲ್ಲಿ ವಕೀಲನ ಮೃತದೇಹ ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಈ ಮೃತದೇಹ ಪತ್ತೆಯಾಗಿದೆ. ನೈಸ್ ರಸ್ತೆಯಲ್ಲಿ ಜಗದೀಶ್ ಎಂಬ ವಕೀಲ ಶವವಾಗಿ ಪತ್ತೆಯಾಗಿದ್ದಾರೆ.
ಬನ್ನೇರುಘಟ್ಟ ಕನಕಪುರ ನೈಸ್ ರಸ್ತೆಯಲ್ಲಿ ಜಗದೀಶ್ ಬರುತ್ತಿದ್ದರು. ಕಿಯಾ ಸೆಲ್ಟೋಸ್ ಕಾರಿನಲ್ಲಿ ವಕೀಲ ಜಗದೀಶ್ ಬರುತ್ತಿದ್ದರು.
ಇದೇ ರಸ್ತೆಯಲ್ಲಿ ವಕೀಲ ಜಗದೀಶ್ ಮೃತ ದೇಹ ಸಿಕ್ಕಿದೆ. ಆದರೆ ಜಗದೀಶ್ ಅವರ ಕಾರು ನಿಂತಿದ್ದ 200 ಮೀಟರ್ ದೂರದಲ್ಲಿ ಅವರ ಮೃತದೇಹ ಇತ್ತು. ಇದು ಹಲವು ಅನುಮಾಗಳಿಗೆ ದಾರಿ ಮಾಡಿದೆ.
ಕಾರಿನ ಹಲವೆಡೆ ಅಪಘಾತವಾದ ಗುರುತುಗಳಿವೆ. ಮೇ.02 ರಂದು ಸಂಜೆ 7.30 ರಿಂದ 8 ಗಂಟೆ ಸುಮಾರಿಗೆ ಮೃತದೇಹ ಪಡೆಯಾಗಿದೆ. ಕಾರು ಟಚ್ ಆದ ವಿಚಾರಕ್ಕೆ ಗಲಾಟೆಯಾಗಿ ಮರ್ಡರ್ ನಡೆದಿದೆಯಾ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದ್ಯಾ? ಎಂಬ ಅನುಮಾನ ಶುರುವಾಗಿದೆ.
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹಲವು ಆಯಾಮಗಳಲ್ಲಿ ವಕೀಲ ಜಗದೀಶ್ ಅವರ ಸಾವಿನ ತನಿಖೆ ಮಾಡುತ್ತಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಕೊಲೆಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ.














