Monday, March 9, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ದೇಹದ ತೂಕ ಇಳಿಸಿ, ಬೊಜ್ಜು ಕರಗಿಸಲು ಇಲ್ಲಿದೆ ಪರಿಹಾರ -ಕಹಳೆ ನ್ಯೂಸ್

ಪುತ್ತೂರು: ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳು ಮುಂದುವರೆದು ದಿನನಿತ್ಯದ ಜೀವನವನ್ನು ಸುಲಭವಾಗಿಸಿರುವುದು, ಪರೋಕ್ಷವಾಗಿ ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದಂತೂ ಸುಳ್ಳಲ್ಲ. ನಮ್ಮ ಪೂರ್ವಜರು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯವನ್ನು ಗಿಟ್ಟಿಸಿಕೊಂಡು ಐಷಾರಾಮಿ ಜೀವನ ನಡೆಸದಿದ್ದರೂ , ಹೊಲಗದ್ದೆಗಳಲ್ಲಿ ದುಡಿದು – ಮನೆಕೆಲಸಗಳಲ್ಲಿ ತೊಡಗಿಸಿಕೊಂಡು – ತಾವೇ ಬೆಳೆದ ರಾಸಾಯನಿಕ ರಹಿತ ಆಹಾರಗಳನ್ನು ಸೇವಿಸುತ್ತಾ ಆರೋಗ್ಯವಂತ ಬದುಕನ್ನು ಜೀವಿಸಿದ ಅದೃಷ್ಟವಂತರು ಅವರು.

ಆಯುರ್ವೇದದ ಪ್ರಕಾರ ಅತಿಯಾಗಿ ಸಿಹಿಪಾದಾರ್ಥಗಳ ಸೇವನೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹಗಲು ಹೊತ್ತಿನಲ್ಲಿ ನಿದ್ರಿಸುವುದು, ವ್ಯಾಯಾಮರಹಿತ ಜೀವನ, ಹಸಿವಿಲ್ಲದಿದ್ದರೂ ಆಹಾರಸೇವನೆ ಮೊದಲಾದ ಶಾರೀರಿಕ ಕಾರಣಗಳು ಮಾತ್ರವಲ್ಲದೆ, ಮಾನಸಿಕವಾಗಿ ಯಾವುದೇ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿರುವುದೂ ಸ್ಥೌಲ್ಯವನ್ನು ಉಂಟುಮಾಡುತ್ತದೆ.
ವಂಶಪಾರಂಪರ್ಯವಾಗಿಯೂ
ಮತ್ತು ಡಯಾಬಿಟಿಸ್ ಮೊದಲಾದ ರೋಗಗಳ ಪರಿಣಾಮವಾಗಿಯೂ ಸ್ಥೌಲ್ಯ ಉಂಟಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

BMI (ಬಾಡಿ ಮಾಸ್ ಇಂಡೆಕ್ಸ್) ೨೪.೯ ರಿಂದ ಹೆಚ್ಚಿದ್ದರೆ ಮಾತ್ರ ಸ್ಥೂಲ ಕಾಯ ಎಂದು ಪರಿಗಣಿಸಲಾಗುತ್ತದೆ.

ಜಾಹೀರಾತು
ಜಾಹೀರಾತು

ನೆಲ್ಲಿಕಾಯಿಯ ಕಷಾಯ, ರಾಗಿ ಹಾಲು, ಬಾರ್ಲಿ ನೀರು, ಮೊಳಕೆಗಟ್ಟಿದ ಹೆಸರುಕಾಳಿನ ಪದಾರ್ಥಗಳು, ಹಿತವಾದ ಪ್ರಮಾಣದಲ್ಲಿ ತುಪ್ಪದ ಸೇವನೆ, ಹುರುಳಿ ಕಾಳು, ಕುಂಬಳಕಾಯಿ, ಸೋರೆಕಾಯಿ, ಪಡುವಲಕಾಯಿ, ಹೀರೇಕಾಯಿ, ಹಾಗಲಕಾಯಿ, ಮಜ್ಜಿಗೆ, ಅಮೃತಬಳ್ಳಿ ಕಷಾಯ, ಮಧೂದಕ (ಜೇನುತುಪ್ಪವನ್ನು ಸ್ವಲ್ಪ ಪ್ರಮಾಣದ ತಣ್ಣಗೆ ನೀರಿನ ಜೊತೆಗೆ ಮಿಶ್ರ ಮಾಡಿ ಕುಡಿಯುವುದು) ಇತ್ಯಾದಿಗಳು ಬೊಜ್ಜನ್ನು ಕರಗಿಸಲು ಸಹಕಾರಿಯಾಗುತ್ತದೆ.

ಯೋಗಾಸನ ಪ್ರಾಣಾಯಾಮವನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಸೇರಿಸಿಕೊಂಡರೆ ಉತ್ತಮ. ಪಾದಹಸ್ತಾಸನ, ಪಶ್ಚಿಮೋತ್ತಾನಾಸನ, ಜಾನುಶೀರ್ಷಾಸನ, ತ್ರಿಕೋನಾಸನ, ಉಪವಿಷ್ಟಕೋನಾಸನ, ಕಟಿಪರಿವೃತ್ತಾ ಸನ ಇತ್ಯಾದಿ ಆಸನಗಳ ಜೊತೆಗೆ ಸೂರ್ಯಭೇದನ ಪ್ರಾಣಾಯಾಮ, ಉಜ್ಜಯಿ ಪ್ರಾಣಾಯಾಮ ಇತ್ಯಾದಿಗಳನ್ನು ಅಭ್ಯಾಸ ಮಾಡುವುದರಿಂದ ಶರೀರದ ಅತಿಯಾದ ಕೊಬ್ಬು ನಿವಾರಣೆಯಾಗುತ್ತದೆ.
ಎಲ್ಲದಕ್ಕಿಂತಲೂ ಹೆಚ್ಚಾಗಿ ಮೊಬೈಲ್, ವಿಡಿಯೋ ಗೇಮ್ಸ್ ನಂತಹ ಆಲಸ್ಯಕರ ಜೀವನದಿಂದ ಹೊರಗೆ ಬಂದು ಆಟೋಟಗಳು, ವಾಕಿಂಗ್ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ಶಾರೀರಿಕ ಮತ್ತು ಮಾನಸಿಕವಾಗಿ ಉತ್ಸಾಹಿಯಾಗಿರುವುದು ಬಹಳ ಅಗತ್ಯ.

Reference- ಚರಕ ಸಂಹಿತಾ

By – Dr. Surabhi. G
Intern
Puttur