Thursday, March 12, 2026
ಸುದ್ದಿ

ಅಣ್ಣನಿಂದಲೇ ತಮ್ಮನ ಕೊಲೆ: ಆರೋಪಿಗೆ ನ್ಯಾಯಾಂಗ ಬಂಧನ – ಕಹಳೆ ನ್ಯೂಸ್

ಎಂಟು ತಿಂಗಳ ಹಿಂದೆ ನಡೆದ ಕಾರ್ಕಳ ಮಂಗಳಪಾದೆಯ ಅವಿಲ್ ಡಿಸೋಜ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದು ಕೊಂಡಿದೆ. ಅವಿಲ್ ಡಿಸೋಜಾರನ್ನು ಅವರ ಸ್ವಂತ ಅಣ್ಣನೇ ಆಸ್ತಿ ವಿಚಾರದಲ್ಲಿ ಕೊಲೆಗೈದು ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ಮೃತರ ಅಣ್ಣ ಮೆಲ್ವಿನ್ ಸಂತೋಷ್ ಡಿಸೋಜ ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅವಿಲ್ ಡಿಸೋಜ ಗುಡ್‌ಪ್ರೈಡೇ ದಿನ ಮನೆಯಿಂದ ನಾಪತ್ತೆಯಾಗಿರುವುದಾಗಿ ಅವರ ತಂದೆ ಅಲ್ಬರ್ಟ್ ಡಿಸೋಜ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೆಲ್ವಿನ್ ಡಿಸೋಜನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು

ತಂದೆ ತಾಯಿಯ ಆಸ್ತಿ ವಿಚಾರದಲ್ಲಿ ಅವಿಲ್ ಹಾಗೂ ಮೆಲ್ವಿನ್ ಮಧ್ಯೆ ಮನೆಯಲ್ಲಿ ಜಗಳ ನಡೆದಿತ್ತು. ಈ ವೇಳೆ ಮೆಲ್ವಿನ್ ಚೂರಿಯಿಂದ ಇರಿದು, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಅವಿಲ್ ಡಿಸೋಜನನ್ನು ಕೊಲೆ ಮಾಡಿದ್ದ.

ನಂತರ ಮೃತದೇಹವನ್ನು ಮನೆಯ ಸಮೀಪದ ರಾಮ ಸಮುದ್ರದ ಕೆರೆಯ ದಡಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.