Wednesday, March 11, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿರು ಬೇಸಿಗೆಯಲ್ಲಿ ಚರ್ಮದ ಆರೈಕೆಗೆ ನ್ಯಾಚುರಲ್ ಟಿಪ್ಸ್- ಕಹಳೆ ನ್ಯೂಸ್

ಪುತ್ತೂರು: ಹೆಚ್ಚುತ್ತಿರುವ ತಾಪಮಾನದ ಜೊತೆಗೆ ಚರ್ಮರೋಗಗಳು ಹೆಚ್ಚುತ್ತಿರುವುದು ಸರ್ವೇ ಸಾಮಾನ್ಯ. ಹುಳುಕಡ್ಡಿ, ಸರ್ಪಸುತ್ತು, ಸಿಬ್ಬ ಮತ್ತು ಡರ್ಮಟೈಟಿಸ್ ನಂತಹ ರೋಗಗಳು ಹಲವರ ನೆಮ್ಮದಿ ಹಾಳು ಕೆಡವಿರುವುದಂತೂ ಸತ್ಯ. ವಸಂತ ಋತುವಿನಲ್ಲಿ ಶರೀರದಲ್ಲಿ ಉಂಟಾಗುವ ಕಫ ಪ್ರಕೋಪ ಮತ್ತು ಗ್ರೀಷ್ಮ ಋತುವಿನ ಏರಿದ ತಾಪಮಾನ ಮತ್ತು ತೇವಾಂಶ ಬೇಸಿಗೆಯಲ್ಲಿ ಚರ್ಮರೋಗವನ್ನು ಹೆಚ್ಚಿಸುವಲ್ಲಿ ಪ್ರಮುಖ ಕಾರಣವೆನಿಸುತ್ತದೆ. ಅಲ್ಲದೆ, ಪಿತ್ತವೃದ್ಧಿಕಾರಕ ಆಹಾರ ಮತ್ತು ವಿಹಾರದ ಸೇವನೆಯೂ ಚರ್ಮರೋಗಗಳನ್ನು ಉಂಟುಮಾಡುತ್ತದೆ.

ರಾತ್ರಿಯ ಸಮಯದಲ್ಲಿ ಮೊಸರಿನ ಸೇವನೆ, ಅತಿಯಾದ ಬಿಸಿಲಿನ ಬೇಗೆಗೆ ದಣಿದು ಬಂದು ಶೀತಜಲದ ಸೇವನೆ, ಎಣ್ಣೆಯಲ್ಲಿ ಕರಿದ ತಿಂಡಿಗಳು, ವಿರುದ್ಧಾಹಾರಗಳು , ಧೂಳು ಮತ್ತು ಅತಿಯಾದ ಬಿಸಿಲಿಗೆ ಮೈಯೊಡ್ಡುವುದು ಇತ್ಯಾದಿಗಳಿಂದ ದೂರ ಉಳಿಯುವುದು ಉತ್ತಮ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎಳನೀರು ಮತ್ತು ದ್ರವಾಹಾರಗಳ ಸೇವನೆ, ಮಜ್ಜಿಗೆ, ಮೊಳಕೆಗಟ್ಟಿದ ಹೆಸರುಕಾಳು, ಹುರುಳಿಕಾಳು, ಕುಚ್ಚಿಗೆ ಅನ್ನ, ಬಾರ್ಲಿ ನೀರು, ತುಪ್ಪ, ಜೇನುತುಪ್ಪ, ಬೆಳ್ಳುಳ್ಳಿ, ಹಾಗಲಕಾಯಿ, ಪಡುವಲಕಾಯಿ, ಕುಂಬಳಕಾಯಿ, ಸೋರೆಕಾಯಿ, ಸೌತೆ ಇತ್ಯಾದಿಗಳನ್ನು ದಿನನಿತ್ಯದ ಆಹಾರಗಳಲ್ಲಿ ಸೇರಿಸಿಕೊಂಡರೆ ಚರ್ಮ ರೋಗಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಸಹಕಾರಿಯಾಗುತ್ತದೆ.

ಜಾಹೀರಾತು
ಜಾಹೀರಾತು

ಚಹಾ, ಕಾಫಿ, ಮಾಂಸಾಹಾರಗಳು, ಅವಲಕ್ಕಿ , ಉಪ್ಪಿನಕಾಯಿ, ಬದನೆ, ಸುವರ್ಣಗೆಡ್ಡೆಯಂತಹ ಗೆಡ್ಡೆಗೆಣಸು, ಆಲೂಗೆಡ್ಡೆ, ಬೆಂಡೆಕಾಯಿ, ಮೊಸರು, ಅತಿಯಾದ ಎಣ್ಣೆಯ ಬಳಕೆ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅತಿಯಾಗಿ ಉಪ್ಪು, ಹುಳಿ ಮತ್ತು ಖಾರದ ಸೇವನೆಯನ್ನು ನಿಯಂತ್ರಿಸಿದರೆ ಒಳ್ಳೆಯದು.

ಕಹಿಬೇವಿನ ಎಲೆಗಳು, ಕುಟಜದ ತೊಗಟೆಯನ್ನು ಕುದಿಸಿದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

ಆಯುರ್ವೇದದಲ್ಲಿ ಉಲ್ಲೇಖವಾಗಿರುವ ವಮನ, ವಿರೇಚನ, ರಕ್ತಮೋಕ್ಷಣ ಮೊದಲಾದ ಪಂಚಕರ್ಮಗಳನ್ನು ವೈದ್ಯರ ಸೂಕ್ತ ಮಾರ್ಗದರ್ಶನ ಪಡೆದು ಋತುವಿಗೆ ಅನುಗುಣವಾಗಿ ಮಾಡಿಸುವುದು ಒಳ್ಳೆಯದು.

Reference – ಚರಕ ಸಂಹಿತಾ, ಕುಷ್ಠ ಚಿಕಿತ್ಸಾ ಅಧ್ಯಾಯ.
ಯೋಗರಾತ್ನಾಕರ.

By – ಡಾ. ಸುರಭಿ. ಜಿ
ಪುತ್ತೂರು
Intern (ayurveda)
drsurabhibhat10@gmail.com